alex Certify ಅಚ್ಚರಿಗೆ ಕಾರಣವಾಗಿದೆ ವಿಚಿತ್ರ ಪ್ರಾಣಿಯ ವಿಡಿಯೋ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿಗೆ ಕಾರಣವಾಗಿದೆ ವಿಚಿತ್ರ ಪ್ರಾಣಿಯ ವಿಡಿಯೋ…!

ಸಾಮಾಜಿಕ ಜಾಲತಾಣವು ಆಸಕ್ತಿದಾಯಕ, ಆಕರ್ಷಕ ಮತ್ತು ವಿಲಕ್ಷಣ ವಿಡಿಯೋಗಳ ಉಗ್ರಾಣ ಎಂದೇ ಹೇಳಬಹುದು.

ಇದೀಗ ಬಿಹಾರದ ಮುಜಾಫರ್​ಪುರ ಜಿಲ್ಲೆಯಲ್ಲಿ ವಿಚಿತ್ರ ಪ್ರಾಣಿಯೊಂದು ಕ್ಯಾಮೆರಾದಲ್ಲಿ ಸೆರೆಯಾಗಿರುವ ವಿಡಿಯೋ ಜಾಲತಾಣದಲ್ಲಿ ವೈರಲ್​ ಆಗಿದೆ.

ಆ ಪ್ರಾಣಿಯು ಬಳಕೆಯಲ್ಲಿಲ್ಲದ ಕೊಠಡಿಯಲ್ಲಿನ ಸ್ಲ್ಯಾಬ್​ ಮೇಲೆ ಕೆಳಗೆ ಹತ್ತಿಳಿಯಲು ಪ್ರಯತ್ನಿಸುವುದು ಕಾಣಿಸುತ್ತದೆ.

ಅದು ವೇಗವಾಗಿ ಗೋಡೆಯ ರ್ಯಾಕ್​ ಮೇಲೆ ಏರುತ್ತದೆ. ಕೆಲವರು ಇದನ್ನು ನಾಯಿ ಇರಬಹುದು ಎಂದರೆ ಮತ್ತೆ ಕೆಲವರು ಮುಂಗುಸಿ ಎಂದು ಭಾವಿಸಿದ್ದಾರೆ.

ಇನ್ನು ಕೆಲವರು ಗೊಂದಲಕ್ಕೊಳಗಾಗಿ ಅದು ಯಾವ ಪ್ರಾಣಿ ಎಂದು ಪ್ರಶ್ನೆಗಳನ್ನು ಹಾಕಿ ಊಹಿಸಿದ್ದಾರೆ. ಇದೇ ವೇಳೆ ವಿಚಿತ್ರ ಪ್ರಾಣಿಯನ್ನು ನೋಡಲು ಹಲವು ಮಂದಿ ಅಲ್ಲಿ ನೆರೆದಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.

ಕಾಮೆಂಟ್​ ವಿಭಾಗವು ನೆಟ್ಟಿಗರ ಊಹೆಗಳಿಂದ ತುಂಬಿದೆ. ಒಬ್ಬರು ಚರ್ಮವಿಲ್ಲದ ಬೆಕ್ಕು ಎಂದು ಕರೆದರೆ, ಇನ್ನೊಬ್ಬರು ಹಾಸ್ಯ ಮಾಡಿ “ಕುತ್ತೆ ಕಾ ಕಪ್ಡಾ ಉತ್ತರ ದಿಯಾ ಹೈ ಕಿಸಿ ನೆ” ಎಂದು ಕೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...