ಅಫ್ಘಾನಿಸ್ತಾನದ ನಾಯಿಯ ಕಥೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕಥೆಯು ನೆಟ್ಟಿಗರ ಕರಳು ಹಿಂಡಿದ್ದು, ನಾಯಿಯ ಪರಿಸ್ಥಿತಿ ಕಂಡು ಭಾವುಕರಾಗಿದ್ದಾರೆ.
ಬುಧವಾರ ಮುಂಜಾನೆ ಪೂರ್ವ ಅಫ್ಘಾನಿಸ್ತಾನದ ಗ್ರಾಮೀಣ, ಪರ್ವತ ಪ್ರದೇಶದಲ್ಲಿ ಪ್ರಬಲ ಭೂಕಂಪ ಸಂಭವಿಸಿ ಸಾವಿರಾರು ಜನರು ಸಾವನ್ನಪ್ಪಿದರೆ ಅಷ್ಟೇ ಸಂಖ್ಯೆಯಲ್ಲಿ ಜನರು ಗಾಯಗೊಂಡರು.
ರಿಕ್ಟರ್ ಮಾಪಕದಲ್ಲಿ 6.1 ರ ತೀವ್ರತೆಯ ಭೂಕಂಪವು ಅನೇಕ ಮನೆಗಳನ್ನು ನಾಶಪಡಿಸಿದೆ. ಇಂತಹ ಧ್ವಂಸಗೊಂಡ ಮನೆಗಳು ಮತ್ತು ಪಾಳುಬಿದ್ದ ಸ್ಥಳದ ನಡುವೆ, ನಾಯಿಯೊಂದು ನಿಯಮಿತವಾಗಿ ಸ್ಥಳಕ್ಕೆ ಭೇಟಿ ನೀಡುವುದು ಮತ್ತು ಏನೋ ಹುಡುಕಲು ಪ್ರಯತ್ನಿಸುತ್ತಿರುವುದನ್ನು ಅಲ್ಲಿನ ಜನ ಗಮನಿಸಿದ್ದಾರೆ. ತನ್ನ ಮನೆ ಹಾಗೂ ಮನೆ ಮಾಲಿಕ ಕಾಣದೇ ಆ ನಾಯಿ ಪರದಾಡಿದೆ.
ಪ್ರವಾಹದಲ್ಲಿ ಮುಳುಗುತ್ತಿದ್ದ ಮಕ್ಕಳನ್ನು ರಕ್ಷಿಸಲು ಜೀವವನ್ನೇ ಒತ್ತೆ ಇಟ್ಟ ʼಅಪ್ಪʼ
ಈ ನಾಯಿಗೆ ಸೇರಿದ ಮನೆಯಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೂ ಭೂಕಂಪದಲ್ಲಿ ಸಾವನ್ನಪ್ಪಿದ್ದಾರೆ. ಆಹಾರ, ಆರೈಕೆಗಾಗಿ ನಾಯಿಯನ್ನು ತಮ್ಮೊಂದಿಗೆ ಕರೆದೊಯ್ಯುವುದಾಗಿ ನೆರೆಮನೆಯವರು ಹೇಳಿದ್ದಾರೆ.