alex Certify ಶಾಕಿಂಗ್: ಪೋಷಕರ ಮಗ್ಗುಲಲ್ಲಿ ಮಲಗಿದ್ದ ಮಗುವನ್ನೇ ಕಚ್ಚಿ ಎಳೆದೊಯ್ದ ನಾಯಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್: ಪೋಷಕರ ಮಗ್ಗುಲಲ್ಲಿ ಮಲಗಿದ್ದ ಮಗುವನ್ನೇ ಕಚ್ಚಿ ಎಳೆದೊಯ್ದ ನಾಯಿ

ಹಾವೇರಿ: ಹಾವೇರಿ ಜಿಲ್ಲೆ ಗುತ್ತಲ ಸಮೀಪದ ಹೊಸರಿತ್ತಿಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಪೋಷಕರ ಮಡಿಲಲ್ಲಿದ್ದ 10 ತಿಂಗಳ ಮಗುವನ್ನು ಬೀದಿ ನಾಯಿ ಕಚ್ಚಿಕೊಂಡು ಹೋಗಿದೆ.

ಗಾಯಗೊಂಡ ಮಗುವನ್ನು ರಕ್ಷಿಸಿ ಹಾವೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನಂತರ ಹುಬ್ಬಳ್ಳಿಯ ಕಿಮ್ಸ್ ಗೆ ಸೇರಿಸಲಾಗಿದೆ. ಅಲೆಮಾರಿ ಸಮುದಾಯದ ದಂಪತಿಯ ಮಗು ಭಾನುವಾರ ರಾತ್ರಿ ಪೋಷಕರ ಜೊತೆ ಮಲಗಿದ್ದ ವೇಳೆಯಲ್ಲಿ ನಾಯಿ ಕಚ್ಚಿಕೊಂಡು ಹೋಗಿದೆ. ಈ ವೇಳೆ ಎಚ್ಚರಗೊಂಡ ದಂಪತಿ ಮಗುವನ್ನು ರಕ್ಷಿಸಿದ್ದಾರೆ. ಮಗುವಿನ ಮುಖ, ಸೇರಿದಂತೆ ದೇಹದ ಭಾಗಗಳನ್ನು ನಾಯಿ ಕಚ್ಚಿದೆ. ಗ್ರಾಮದಲ್ಲಿ ಬೀದಿನಾಯಿಗಳ ಹಾವಳಿ ಮಿತಿ ಮೀರಿದ್ದು, ಕೆಲವು ದಿನಗಳ ಹಿಂದೆಯಷ್ಟೇ ಎಮ್ಮೆ ಕರುವನ್ನು ಕೊಂದು ಹಾಕಿವೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...