ಹಾಲು ಮತ್ತು ಇತರ ಡೈರಿ ಉತ್ಪನ್ನಗಳು ದೇಹಕ್ಕೆ ಬೇಕಾದ ಕ್ಯಾಲ್ಸಿಯಂ, ಪ್ರೋಟೀನ್ ಹಾಗೂ ವಿಟಮಿನ್‌ಗಳಂತಹ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತವೆ. ಆದ್ದರಿಂದ ನಾವು ಅವುಗಳನ್ನು ಹೆಚ್ಚಾಗಿ ಸೇವಿಸುತ್ತೇವೆ. ಆದಾಗ್ಯೂ ಅಸ್ತಮಾದಂತಹ ದೀರ್ಘಕಾಲದ ಉಸಿರಾಟದ ಕಾಯಿಲೆಗಳ ಮೇಲೆ ಡೈರಿ ಉತ್ಪನ್ನಗಳ ಸಂಭಾವ್ಯ ಪ್ರಭಾವದ ಕುರಿತು ಸಂಶೋಧನೆಗಳು ನಡೆಯುತ್ತಿವೆ.
ಆಸ್ತಮಾ ಸಮಸ್ಯೆ ಇರುವವರಿಗೆ ಆಮ್ಲಜನಕವನ್ನು ತೆಗೆದುಕೊಳ್ಳುವ ಟ್ಯೂಬ್‌ನಲ್ಲಿ ಊತ ಮತ್ತು ಸಂಕೋಚನವಿರುತ್ತದೆ. ಇದು ಉಬ್ಬಸ, ಉಸಿರಾಟದ ತೊಂದರೆ, ಎದೆಯ ಬಿಗಿತ ಮತ್ತು ಕೆಮ್ಮಿನಂತಹ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ. ಕೆಲವತಿಗೆ ಡೈರಿ ಉತ್ಪನ್ನಗಳನ್ನು ಸೇವಿಸಿದ ನಂತರ ರೋಗಲಕ್ಷಣಗಳು ಹೆಚ್ಚಾಗಬಹುದು. ಆದರೆ ಹಾಲು ಮತ್ತು ಅಸ್ತಮಾ ನಡುವಿನ ಸಂಬಂಧವು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ.
ಅಸ್ತಮಾ ಎಂದರೇನು?
ಅಸ್ತಮಾವು ದೀರ್ಘಾವಧಿಯ ಉಸಿರಾಟದ ಕಾಯಿಲೆ. ಆಮ್ಲಜನಕವನ್ನು ಸಾಗಿಸುವ ಪೈಪ್ ಊದಿಕೊಳ್ಳುತ್ತದೆ ಮತ್ತು ಕಿರಿದಾಗುತ್ತದೆ. ಇದು ಉಬ್ಬಸ, ಉಸಿರಾಟದ ತೊಂದರೆ, ಎದೆ ಬಿಗಿತ ಮತ್ತು ಕೆಮ್ಮು ಮುಂತಾದ ಲಕ್ಷಣಗಳನ್ನು ಉಂಟುಮಾಡುತ್ತದೆ. ಸಾಮಾನ್ಯವಾಗಿ ಅಲರ್ಜಿ, ಉಸಿರಾಟದ ಸೋಂಕು, ವ್ಯಾಯಾಮ ಅಥವಾ ಪರಿಸರ ಮಾಲಿನ್ಯಕಾರಕಗಳಂತಹ ಅಂಶಗಳಿಂದ ಇವು ಪ್ರಚೋದಿಸಲ್ಪಡುತ್ತವೆ. ಅಸ್ತಮಾವು ಎಲ್ಲಾ ವಯಸ್ಸಿನ ಜನರ ಮೇಲೆ ಪರಿಣಾಮ ಬೀರುತ್ತದೆ.
ಡೈರಿ ಉತ್ಪನ್ನಗಳು ಕ್ಯಾಸೀನ್ ಮತ್ತು ಹಾಲೊಡಕುಗಳಂತಹ ಪ್ರೋಟೀನ್ಗಳನ್ನು ಹೊಂದಿರುತ್ತವೆ. ಇದು ಕೆಲವರಲ್ಲಿ ಸೂಕ್ಷ್ಮತೆಯನ್ನು ಉಂಟುಮಾಡಬಹುದು. ಡೈರಿ ಉತ್ಪನ್ನಗಳ ಸೇವನೆಯು ದೇಹದಲ್ಲಿ ಉರಿಯೂತದ ಪ್ರತಿಕ್ರಿಯೆಯನ್ನು ಉಂಟುಮಾಡಬಹುದು. ಪರಿಣಾಮ ಅಸ್ತಮಾ ರೋಗಲಕ್ಷಣಗಳು ಉಲ್ಬಣಿಸಬಹುದು.
ಆಸ್ತಮಾದಿಂದ ಬಳಲುತ್ತಿರುವ ಕೆಲವರು ಡೈರಿ ಉತ್ಪನ್ನಗಳನ್ನು ಸೇವಿಸಿದ ನಂತರ ಆಮ್ಲಜನಕದ ಪೈಪ್‌ನಲ್ಲಿ ಲೋಳೆಯು ಹೆಚ್ಚಾಗಬಹುದು. ಈ ಹೆಚ್ಚುವರಿ ಲೋಳೆಯು ಆಮ್ಲಜನಕ ಪೂರೈಕೆಯ ಪೈಪ್‌ನಲ್ಲಿ ಅಡಚಣೆಯನ್ನು ಉಂಟುಮಾಡುತ್ತದೆ ಮತ್ತು ಅಸ್ತಮಾದಿಂದ ಬಳಲುತ್ತಿರುವ ಜನರಲ್ಲಿ ಉಸಿರಾಟದ ತೊಂದರೆಯನ್ನು ಹೆಚ್ಚಿಸುತ್ತದೆ.
ಅಸ್ತಮಾ ಹೊಂದಿರುವ ಕೆಲವರು ಡೈರಿ ಪ್ರೋಟೀನ್‌ಗಳಿಗೆ ಅಲರ್ಜಿ ಅಥವಾ ಅಸಹಿಷ್ಣುತೆ ಹೊಂದಿರಬಹುದು. ತುರಿಕೆ, ದದ್ದುಗಳಂತಹ ಸೌಮ್ಯ ರೋಗಲಕ್ಷಣಗಳಿಂದ ಹಿಡಿದು ಅನಾಫಿಲ್ಯಾಕ್ಸಿಸ್‌ನಂತಹ ತೀವ್ರ ಪ್ರತಿಕ್ರಿಯೆಗಳವರೆಗೆ ಇದರ ಲಕ್ಷಣಗಳು ಇರಬಹುದು. ಇದು ಉಸಿರಾಟದ ಕ್ರಿಯೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.
ಡೈರಿ ಉತ್ಪನ್ನಗಳ ಸೇವನೆ ಮತ್ತು ಆಸ್ತಮಾ ನಡುವಿನ ಸಂಬಂಧವನ್ನು ಪರೀಕ್ಷಿಸುವ ಅಧ್ಯಯನಗಳು ಮಿಶ್ರ ಫಲಿತಾಂಶಗಳನ್ನು ನೀಡಿವೆ. ಕೆಲವು ಅಧ್ಯಯನಗಳು ಸಕಾರಾತ್ಮಕ ಸಂಬಂಧವನ್ನು ಕಂಡುಕೊಂಡಿವೆ. ಬಾಲ್ಯದಲ್ಲಿ ಡೈರಿ ಉತ್ಪನ್ನಗಳ ಸೇವನೆಯಿಂದ ಅಸ್ತಮಾ ಅಥವಾ ಉಸಿರಾಟದ ತೊಂದರೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಈಗಾಗಲೇ ಅಸ್ತಮಾದಿಂದ ಬಳಲುತ್ತಿರುವ ವಯಸ್ಕರಲ್ಲಿ ರೋಗಲಕ್ಷಣಗಳ ಮೇಲೆ ಡೈರಿ ಉತ್ಪನ್ನಗಳ ಸೇವನೆಯ ಪರಿಣಾಮಗಳು ಬದಲಾಗಬಹುದು. ಕೆಲವರಿಗೆ ರೋಗಲಕ್ಷಣಗಳು ಹೆಚ್ಚಾದರೆ ಇನ್ನು ಕೆಲವರ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ.