
ದೊಡ್ಡಬಳ್ಳಾಪುರ: ಕುಡುಕ ಮಗನ ಕಿರುಕುಳ, ಹಿಂಸೆಯಿಂದ ಬೇಸತ್ತ ತಂದೆಯೊಬ್ಬ ಹೆತ್ತ ಮಗನ್ನೇ ಬರ್ಬರವಾಗಿ ಕೊಲೆಗೈದಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ವಾಣಿಗರಹಳ್ಳಿಯಲ್ಲಿ ನಡೆದಿದೆ.
28 ವರ್ಷದ ಆದರ್ಶ್ ತಂದೆಯಿಂದ ಕೊಲೆಯಾದ ಯುವಕ. 58 ವರ್ಷದ ಜಯರಾಮಯ್ಯ ಮಗನನ್ನೇ ಕೊಂದ ತಂದೆ.
ಮಗ ಆದರ್ಶ್ ಪ್ರತಿ ದಿನ ಕುಡಿದುಬಂದು ಕಿರುಕುಳ ನೀಡುತ್ತಿದ್ದ. ಮನೆಯಲ್ಲಿ ಗಲಾಟೆ ಮಾಡುತ್ತಿದ್ದನಂತೆ. ಅಲ್ಲದೇ ಇತ್ತೀಚೆಗೆ ಕುಡಿಯಲು ಹಣ ಕೊಡಲಿಲ್ಲ ಎಂದು ತಾಯಿಯ ಮೇಲೆ ಹಲ್ಲೆ ಮಾಡಿದ್ದನಂತೆ. ಮಗನ ಕುಡಿತದ ಚಟಕ್ಕೆ ನೊಂದುಬೆಂದ ತಂದೆ ಜಯರಾಮಯ್ಯ, ಮಗನ ಕೈ-ಕಾಲು ಕಟ್ಟಿಹಾಕಿ ಹೊಡೆದು ಕೊಲೆಗೈದು, ಬಳಿಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟಿದ್ದಾರೆ ಎಂದು ತಿಳಿದುಬಂದಿದೆ.