alex Certify ನ್ಯೂಮೋನಿಯಾದಿಂದ ಬಳಲುತ್ತಿದ್ದ ಬಾಲಕ 150 ದಿನಗಳ ವೆಂಟಿಲೇಟರ್‌ ವಾಸದಿಂದ ವಾಪಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನ್ಯೂಮೋನಿಯಾದಿಂದ ಬಳಲುತ್ತಿದ್ದ ಬಾಲಕ 150 ದಿನಗಳ ವೆಂಟಿಲೇಟರ್‌ ವಾಸದಿಂದ ವಾಪಸ್

ಅಪರೂಪದ ನ್ಯೂಮೋನಿಯಾದಿಂದ ಬಳಲುತ್ತಿದ್ದ ಮಗುವಿಗೆ ಪುಣೆಯ ವೈದ್ಯರು ಮರುಜನ್ಮ ನೀಡಿದ್ದಾರೆ.

2.5 ವರ್ಷ ವಯಸ್ಸಿನ ವರಾತ್‌ (ಬದಲಿ ಹೆಸರು) ಶ್ವಾಸಕೋಶವನ್ನು ಶಾಶ್ವತವಾಗಿ ಹಾನಿ ಮಾಡಬಲ್ಲ ಬೈಲ್ಯಾಟರಲ್ ನ್ಯೂಮೋನಿಯಾದಿಂದ ಬಳಲುತ್ತಿದ್ದ. ತೀವ್ರ ಜ್ವರ, ಕೆಮ್ಮು, ಶೀತ ಹಾಗೂ ಉಸಿರಾಟದಲ್ಲಿ ತೊಂದರೆ ಅನುಭವಿಸುತ್ತಿದ್ದ ವರಾತ್‌ನನ್ನು 150 ದಿನಗಳ ಮಟ್ಟಿಗೆ ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು.

ಸ್ಟ್ರೆಪ್ಟೋಕೊಕ್ಕಸ್ ನ್ಯೂಮೋನಿಯೇ ಎಂಬ ಬ್ಯಾಕ್ಟೀರಿಯಾ ಬಾಲಕನ ಶ್ವಾಸಕೋಶದ 80%ರಷ್ಟು ಭಾಗವನ್ನು ಆವರಿಸಿತ್ತು. ಶ್ವಾಸಕೋಶದ ಸಾಮಾನ್ಯ ಕಾರ್ಯಚಟುವಟಿಕೆಯನ್ನು ಸುಧಾರಿಸಲು ಒಳಗೆ ಹಾಗೂ ಹೊರಗೆ ಸೇರಿಕೊಂಡಿದ್ದ ಗಾಳಿಯನ್ನು ಹೊರ ತೆಗೆಯಲು ವಿಶೇಷ ಕ್ಯಾಥೆರರ್‌ಗಳನ್ನು ಬಳಸಲಾಗಿದೆ.

ಮುನ್ನೆಚ್ಚರಿಕೆ ಕ್ರಮವಾಗಿ,  ಮಕ್ಕಳ ಆಸ್ಪತ್ರೆಯ ವೈದ್ಯರು ಈ ಬಾಲಕನನ್ನು ಸುದೀರ್ಘಾವಧಿಗೆ ವೆಂಟಿಲೇಟರ್‌ನಲ್ಲಿ ಇರಿಸಿದ್ದಾರೆ.

“ನ್ಯೂಮೋನಿಯಾದ ಯಾವುದೇ ಪ್ರಕರಣ ತೀವ್ರವಾಗಬಹುದು. ವರಾತ್‌ನ ಪ್ರಕರಣವು ಇನ್ನಷ್ಟು ಹದಗೆಡುವ ಸಾಧ್ಯತೆಗಳಿದ್ದ ಕಾರಣ ಹಾಗೂ ಸುದೀರ್ಘಾವಧಿಯ ವೆಂಟಿಲೇಶನ್‌ನಿಂದಾಗಿ ಬಹಳಷ್ಟು ಆತಂಕಕಾರಿಯಾಗಿತ್ತು. ಆದರೆ ನಮ್ಮ ತಂಡದ ಸತತ ಪ್ರಯತ್ನಗಳ ಫಲವಾಗಿ ಆತ ಚೇತರಿಸಿಕೊಂಡಿದ್ದಾನೆ,” ಎಂದು ಬಾಲಕನ ಶುಶ್ರೂಷೆ ಮಾಡಿದ ಡಾ. ಅಮಿತಾ ಕೌಲ್ ತಿಳಿಸಿದ್ದಾರೆ.

ಐದು ವರ್ಷದೊಳಗಿನ ಮಕ್ಕಳಿಗೆ ನ್ಯೂಮೋಕೊಕ್ಕಲ್ ರೋಗದಿಂದ ತಡೆಗಟ್ಟಲು ಲಸಿಕೆ ಅತ್ಯಗತ್ಯವಾಗಿದೆ. ಸದ್ಯ ಇದಕ್ಕಾಗಿ ನ್ಯೂಮೋಕೊಕ್ಕಲ್ ಕಾಂಜುಗೇಟ್ ಹಾಗೂ ನ್ಯೂಮೋಕೊಕ್ಕಲ್ ಪಾಲಿಸ್ಯಾಕರೈಡ್ ಹೆಸರಿನ ಎರಡು ಲಸಿಕೆಗಳು ಲಭ್ಯವಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...