alex Certify ಎಕ್ಸ್-​​ರೇ ತೆಗೆಸಿಕೊಂಡ ಮಹಿಳೆಯ ಹೊಟ್ಟೆಯಲ್ಲಿತ್ತು 55 ಬ್ಯಾಟರಿ; ಆಪರೇಷನ್ ಮಾಡಿದ್ದ ವೈದ್ಯರು ಸುಸ್ತೋ ಸುಸ್ತು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಕ್ಸ್-​​ರೇ ತೆಗೆಸಿಕೊಂಡ ಮಹಿಳೆಯ ಹೊಟ್ಟೆಯಲ್ಲಿತ್ತು 55 ಬ್ಯಾಟರಿ; ಆಪರೇಷನ್ ಮಾಡಿದ್ದ ವೈದ್ಯರು ಸುಸ್ತೋ ಸುಸ್ತು..!

ಕೆಲವರಿಗೆ ಸಿಹಿ ತಿಂಡಿ ಅಂದ್ರೆ ಇಷ್ಟ, ಕೆಲವೊಬ್ಬರಿಗೆ ಹುಳಿ, ಇನ್ನೂ ಕೆಲವರಿಗೆ ಖಾರ-ಖಾರ ಇದ್ದರೆನೇ ಮಹದಾನಂದ. ಆದರೆ ಇಲ್ಲಿರುವ ಮಹಿಳೆಗೆ, ಖಾರವೂ ಇಷ್ಟ ಇಲ್ಲ, ಸಿಹಿಯೂ ಇಷ್ಟ ಇಲ್ಲ. ಇವರಿಗೆ ರಿಮೋಟ್​​ನಲ್ಲಿ ಇರೋ ಬ್ಯಾಟರಿಗಳೇ ಫೇವರೇಟ್ ಅಂತೆ. ಅದಕ್ಕೆ ಒಂದಲ್ಲ ಎರಡಲ್ಲ 55 ಬ್ಯಾಟರಿಯನ್ನ ನುಂಗಿದ್ದಾಳೆ ಈ ಮಹಿಳೆ.

ಮಹಿಳೆಗೆ ಬ್ಯಾಟರಿಯ ಸ್ಮೆಲ್ ಮೊದಲಿನಿಂದಲೂ ತುಂಬಾ ಇಷ್ಟವಿತ್ತಂತೆ. ಅದಕ್ಕೋ ಏನೋ ಈ ಮಹಿಳೆ ಒಂದಾದ ಮೇಲೆ ಒಂದು ಬ್ಯಾಟರಿ ನುಂಗಿದ್ದಾಳೆ. ಆದರೆ ಇಷ್ಟು ಬ್ಯಾಟರಿ ನುಂಗಿದ್ದು ನಿಜಕ್ಕೂ ಶಾಕಿಂಗ್​ ಆಗಿದೆ.

ಸಿಲಿಂಡರಾಕಾರದ ಬ್ಯಾಟರಿಗಳನ್ನು ಸೇವಿಸಿದ ನಂತರ 66 ವರ್ಷದ ಮಹಿಳೆ ಐಲ್ರ್ಯಾಂಡ್​ನಲ್ಲಿರುವ ಡಬ್ಲಿನ್​​ನ ಸೇಂಟ್ ವಿನ್ಸೆಂಟ್ಸ್ ಯೂನಿವರ್ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಎಕ್ಸ್-ರೇ ತೆಗೆಸಿದಾಗಲೇ ಆಕೆಗೂ ಗೊತ್ತಾಗಿದ್ದು ಆಕೆಯ ಹೊಟ್ಟೆಯಲ್ಲಿ55 ಬ್ಯಾಟರಿಗಳು ಇವೆ ಅಂತ. ಹೊಟ್ಟೆಯಲ್ಲಿ ಬ್ಯಾಟರಿಗಳಿರುವುದು ಪತ್ತೆಯಾದ ತಕ್ಷಣವೇ ವೈದ್ಯರು ಚಿಕಿತ್ಸೆ ಕೊಡಲು ಆರಂಭಿಸಿದ್ದಾರೆ. ಆ ಬ್ಯಾಟರಿಗಳು ನೈಸರ್ಗಿಕವಾಗಿ ಹೊರಬರುವಂತೆ ಔಷಧಿಯನ್ನ ಕೊಡಲಾಗಿದೆ. ಒಂದು ವಾರದಲ್ಲಿ ಕೇವಲ 5 ಎಎ ಗಾತ್ರದ ಬ್ಯಾಟರಿಗಳು ಹೊರಬಂದಿದ್ದವು. ಹೀಗೆಯೇ ಆದರೆ ಮುಂದೆ ಇನ್ನೂ ದೊಡ್ಡ ಅಪಾಯವಾಗಬಹುದು ಅನ್ನೊದನ್ನ ಅರಿತ ವೈದ್ಯರು ತಕ್ಷಣವೇ ಚಿಕಿತ್ಸೆಯ ಮೂಲಕ ಹೊಟ್ಟೆಯಲ್ಲಿ ಉಳಿದಿದ್ದ ಬ್ಯಾಟರಿಗಳನ್ನ ಹೊರಗೆ ತೆಗೆದಿದ್ದಾರೆ.

ಅಸಲಿಗೆ ಬ್ಯಾಟರಿಗಳ ತೂಕದಿಂದಾಗಿ, ಹಿಗ್ಗಿದ ಹೊಟ್ಟೆಯು ಪ್ಯುಬಿಕ್ ಮೂಳೆಯ ಮೇಲೆ ನೇತಾಡುತ್ತದೆ. ಹೀಗಾಗಿ ಬ್ಯಾಟರಿಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದುಹಾಕುವ ಅಗತ್ಯವಿತ್ತು. ನಂತರ ಶಸ್ತ್ರಚಿಕಿತ್ಸಕರು ಆಕೆಯ ಹೊಟ್ಟೆಯಲ್ಲಿ ಸಣ್ಣ ರಂಧ್ರ ಮಾಡಿ ಅದರಿಂದ ಉಳಿದ 51 ಬ್ಯಾಟರಿಗಳನ್ನು ತೆಗೆದಿದ್ದಾರೆ.

ಈ ಪ್ರಮಾಣದಲ್ಲಿ ಬ್ಯಾಟರಿ ನುಂಗಿರುವ ಪ್ರಕರಣ ಇದೇ ಮೊದಲ ಬಾರಿಗೆ ಬೆಳಕಿಗೆ ಬಂದಿದೆ. ಮಕ್ಕಳು ಚಿಕ್ಕ ಚಿಕ್ಕ ಬ್ಯಾಟರಿ ನುಂಗಿರುವ ಘಟನೆಗಳು ಸಾಮಾನ್ಯ ಆಗಿದ್ದರೂ ಉದ್ದೇಶಪೂರಕವಾಗಿ ಈ ಪ್ರಮಾಣದಲ್ಲಿ ಬ್ಯಾಟರಿ ನುಂಗಿರುವ ಘಟನೆ ಇದೇ ಮೊದಲ ಬಾರಿ ನಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...