alex Certify ರೋಗಿ ಕಿಡ್ನಿಯಿಂದ ಬರೋಬ್ಬರಿ 156 ಕಲ್ಲುಗಳನ್ನು ಹೊರತೆಗೆದ ವೈದ್ಯರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೋಗಿ ಕಿಡ್ನಿಯಿಂದ ಬರೋಬ್ಬರಿ 156 ಕಲ್ಲುಗಳನ್ನು ಹೊರತೆಗೆದ ವೈದ್ಯರು…!

ಹೈದರಾಬಾದ್‌ನ ರೆನಲ್ ಕೇರ್‌ ಆಸ್ಪತ್ರೆಯೊಂದರ ವೈದ್ಯರು ಕಿಡ್ನಿ ಕಲ್ಲಿನ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಗೆ ’ಕೀಹೋಲ್ ಓಪನಿಂಗ್’ ಮಾಡಿ 156 ಕಲ್ಲುಗಳನ್ನು ಹೊರತೆಗೆದಿದ್ದಾರೆ.

ಒಬ್ಬ ರೋಗಿಯ ದೇಹದಿಂದ, ಲ್ಯಾಪರಾಸ್ಕೋಪಿ ಮತ್ತು ಎಂಡೋಸ್ಕೋಪಿ ಮೂಲಕ ಹೊರತೆಗೆಯಲಾದ ಅತ್ಯಂತ ಹೆಚ್ಚಿನ ಸಂಖ್ಯೆಯ ಕಿಡ್ನಿ ಕಲ್ಲುಗಳು ಇವಾಗಿವೆ ಎಂದು ನಗರದ ಪ್ರೀತಿ ಯೂರಾಲಜಿ ಮತ್ತು ಕಿಡ್ನಿ ಆಸ್ಪತ್ರೆ ಹೇಳಿಕೊಂಡಿದೆ.

BIG NEWS: ಪಾದಯಾತ್ರೆಗೆ ಸಜ್ಜಾದ ಯುವ ಕಾಂಗ್ರೆಸ್; ಜಾರಕಿಹೊಳಿ ಸಿಡಿ ಕೇಸ್; ನಿಲುವಳಿ ಸೂಚನೆ ಮಂಡಿಸಲು ಸಿದ್ಧತೆ ನಡೆಸಿದ ಕೈ ಪಾಳಯ

ಹುಬ್ಬಳ್ಳಿಯ ಶಾಲೆಯೊಂದರಲ್ಲಿ ಶಿಕ್ಷಕರಾಗಿರುವ 50 ವರ್ಷ ವಯಸ್ಸಿನ ರೋಗಿಗೆ ಕಿಬ್ಬೊಟ್ಟೆಯಲ್ಲಿ ದಿಢೀರ್‌ ನೋವು ಕಾಣಿಸಿಕೊಂಡು ಸ್ಕ್ರೀನಿಂಗ್ ಮಾಡಿಸಿದಾಗ ಆತನ ಕಿಡ್ನಿಯಲ್ಲಿ ದೊಡ್ಡ ಪ್ರಮಾಣದಲ್ಲಿ ರೆನಲ್ ಕಲ್ಲುಗಳು ಸಂಗ್ರಹವಾಗಿರುವುದು ಕಂಡು ಬಂದಿದೆ. ಎರಡು ವರ್ಷಗಳಿಂದ ಕಿಡ್ನಿಯಲ್ಲಿ ಕಲ್ಲುಗಳು ಶೇಖರಣೆಯಾಗುತ್ತಾ ಬಂದರೂ ಸಹ ಯಾವುದೇ ಲಕ್ಷಣಗಳು ಗೋಚರಿಸದ ಕಾರಣ ರೋಗಿಗೆ ವಿಷಯ ಗೊತ್ತಾಗಿರಲಿಲ್ಲ.

“ಮೂರು ಗಂಟೆಗಳ ಕಾಲ ನಡೆದ ಲ್ಯಾಪರೋಸ್ಕೋಪಿ ಮತ್ತು ಎಂಡೋಸ್ಕೋಪಿ ಮೂಲಕ ಕಲ್ಲುಗಳನ್ನು ಸಂಪೂರ್ಣವಾಗಿ ಹೊರ ತೆಗೆಯಲಾಗಿದೆ. ದೇಹದಲ್ಲಿ ದೊಡ್ಡದಾಗಿ ಕುಯ್ಯುವ ಬದಲಿಗೆ ಸರಳವಾದ ಕೀಹೋಲ್ ಓಪನಿಂಗ್ ಮಾಡುವ ಮೂಲಕ ಕಲ್ಲುಗಳನ್ನು ಪೂರ್ಣವಾಗಿ ಹೊರತೆಗೆಯಲಾಗಿದೆ. ರೋಗಿಯು ಈಗ ಆರೋಗ್ಯವಾಗಿದ್ದು, ಚೇತರಿಸಿಕೊಳ್ಳುತ್ತಿದ್ದು, ತಮ್ಮ ದೈನಂದಿನ ಚಟುವಟಿಕೆಗಳಿಗೆ ಮರಳಿದ್ದಾರೆ,” ಎಂದು ವೈದ್ಯ ಚಂದ್ರ ಮೋಹನ್ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...