alex Certify ಪುಟಾಣಿಯನ್ನು ನಗಿಸುತ್ತಲೇ ಇಂಜೆಕ್ಷನ್​ ಕೊಟ್ಟ ವೈದ್ಯ: ವೈರಲ್​ ವಿಡಿಯೋಗೆ ಶ್ಲಾಘನೆಗಳ ಸುರಿಮಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟಾಣಿಯನ್ನು ನಗಿಸುತ್ತಲೇ ಇಂಜೆಕ್ಷನ್​ ಕೊಟ್ಟ ವೈದ್ಯ: ವೈರಲ್​ ವಿಡಿಯೋಗೆ ಶ್ಲಾಘನೆಗಳ ಸುರಿಮಳೆ

ಚಿಕ್ಕಮಕ್ಕಳಿಗೆ ಚುಚ್ಚುಮದ್ದು ನೀಡುವುದು ಎಂದರೆ ಸುಲಭದ ಮಾತಲ್ಲ, ಎಷ್ಟೋ ವೇಳೆ ಇಂಜೆಕ್ಷನ್​ ಎಂದರೆ ದೊಡ್ಡವರೇ ಭಯಭೀತರಾಗುವುದು ಉಂಟು. ಇದೇ ಕಾರಣಕ್ಕೆ ಹಲವರು ಆಸ್ಪತ್ರೆಯ ಸಹವಾಸಕ್ಕೇ ಹೋಗುವುದಿಲ್ಲ. ಇನ್ನು ಚಿಕ್ಕಮಕ್ಕಳಿಗಂತೂ ಕೇಳುವುದೇ ಬೇಡ.

ಪುಟ್ಟ ಮಕ್ಕಳಿಗೆ ಇಂಜೆಕ್ಷನ್​ ಚುಚ್ಚಲು ವೈದ್ಯರು ಹಲವಾರು ವಿಧಗಳನ್ನು ಅನುಸರಿಸುವುದನ್ನು ನಾವು ನೋಡುತ್ತಲೇ ಇರುತ್ತೇವೆ. ಅಪ್ಪ-ಅಮ್ಮ ಮಕ್ಕಳ ಗಮನ ಬೇರೆಡೆ ಸೆಳೆದು ಚುಚ್ಚುಮದ್ದು ನೀಡಿಸುವುದೂ ಇದೆ. ಆದರೂ ಇಂಜೆಕ್ಷನ್​ ಚುಚ್ಚಿದ ತಕ್ಷಣ ಮಕ್ಕಳು ಅರೆಕ್ಷಣ ಅಳುವುದು ಉಂಟು. ಆದರೆ ಈ ವಿಡಿಯೋ ನೋಡಿದರೆ ನಿಮಗೇ ಅಚ್ಚರಿಯಾಗಬಹುದು.

ವೈದ್ಯರೊಬ್ಬರು ಪುಟಾಣಿ ಮಗುವಿನ ಗಮನವನ್ನು ಬೇರೆಡೆ ಸೆಳೆದು ಅದಕ್ಕೆ ತಿಳಿಯದಂತೆ ಚುಚ್ಚುಮದ್ದು ನೀಡಿರುವ ವಿಡಿಯೋ ಇದಾಗಿದೆ. ಮಕ್ಕಳ ವೈದ್ಯರಾಗಿರುವ ಡಾ ಸಯ್ಯದ್ ಮುಜಾಹಿದ್ ಹುಸೇನ್ ಅವರು ಈ ವಿಡಿಯೋ ಶೇರ್​ ಮಾಡಿಕೊಂಡಿದ್ದು, ಈ ವಿಡಿಯೋ ಇದಾಗಲೇ 22 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ.

ಈಗ ವೈರಲ್ ಆಗಿರುವ ವೀಡಿಯೊದಲ್ಲಿ, ಮಗು ತನ್ನ ಮೊದಲ ಲಸಿಕೆಯನ್ನು ಪಡೆಯಲು ಸಿದ್ಧವಾಗಿ ಮಲಗಿರುವುದನ್ನು ನೋಡಬಹುದು. ಮಗುವನ್ನು ಬೇರೆಡೆಗೆ ಸೆಳೆಯಲು ವೈದ್ಯರು ಕೆಲವೊಂದು ತಮಾಷೆ ಮಾಡುತ್ತಾರೆ. ನಂತರ ಮಗುವಿಗೆ ಗೊತ್ತಿಲ್ಲದಂತೆಯೇ ಇಂಜೆಕ್ಷನ್​ ಕೊಡುತ್ತಾರೆ. ಇಂಜೆಕ್ಷನ್​ ಕೊಟ್ಟಾಗ ಮಗು ಒಂದೆರಡು ಸೆಕೆಂಡ್​ ಅತ್ತರೂ ಮತ್ತೆ ವೈದ್ಯರು ಗೊಂಬೆ ತೋರಿಸಿ ಅದಕ್ಕೆ ನಗಿಸುತ್ತಾರೆ. ವೈದ್ಯರ ಈ ಕ್ರಮಕ್ಕೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...