ಪಶ್ಚಿಮ ಬಂಗಾಳ ಮೂಲದ ಎಂಬಿಬಿಎಸ್ ವೈದ್ಯೆಯೊಬ್ಬರು ವಿದೇಶದ ಮೆಡಿಕಲ್ ಗ್ರ್ಯಾಜುಯೇಟ್ ಪದವಿ ಪಡೆಯುವ ಸಲುವಾಗಿ ಕಷ್ಟಪಟ್ಟು ಓದುವುದನ್ನು ಬದಿಗಿಟ್ಟು, ಆನ್ಲೈನ್ ಜ್ಯೋತಿಷಿಯ ಮೊರೆ ಹೋಗಿ 80 ಸಾವಿರ ರೂ. ಕಳೆದುಕೊಂಡಿದ್ದಾರೆ.
ಸದ್ಯ ಹೈದರಾಬಾದ್ನ ಕೊಂಡಾಪುರ ಪ್ರದೇಶದಲ್ಲಿ ವಾಸಿಸುತ್ತಿರುವ ಮಹಿಳಾ ವೈದ್ಯೆಗೆ ವೃತ್ತಿಯಲ್ಲಿ ಹೆಚ್ಚಿನ ಸಾಧನೆ ಮಾಡುವ ಇರಾದೆ ಇತ್ತು. ಅದಕ್ಕಾಗಿ ಫಾರಿನ್ ಮೆಡಿಕಲ್ ಗ್ರ್ಯಾಜುಯೇಟ್ ಎಕ್ಸಾಮಿನೇಷನ್ (ಎಫ್ಎಂಜಿಇ) ಪರೀಕ್ಷೆಯನ್ನು ತೆಗೆದುಕೊಂಡಿದ್ದರು. ಚೆನ್ನಾಗಿ ಶ್ರಮವಹಿಸಿ ಓದಿಕೊಂಡು ಪರೀಕ್ಷೆ ಪಾಸ್ ಮಾಡುವುದನ್ನು ಬಿಟ್ಟು ಜ್ಯೋತಿಷಿಯಿಂದ ಪೂಜೆ ಮಾಡಿಸಿ, ಭರ್ಜರಿ ಅಂಕಗಳನ್ನು ಪಡೆಯಲು ಮುಂದಾಗಿದ್ದರು.
ಆನ್ಲೈನಲ್ಲಿ ಪರಿಚಯವಾದ ಕಳ್ಳ ಜ್ಯೋತಿಷಿಯೊಬ್ಬ ದೊಡ್ಡ ಪೂಜೆ ಮಾಡಿ ಪಾಸ್ ಮಾಡಿಸುವೆ ಎಂದು ನಂಬಿಸಿ ವೈದ್ಯೆಯಿಂದ 80 ಸಾವಿರ ರೂ. ಕಿತ್ತುಕೊಂಡು ಪರಾರಿಯಾಗಿದ್ದಾನೆ. ಆ ನಕಲಿ ಜ್ಯೋತಿಷಿಯ ಹೆಸರು ಬಿಸ್ವಜಿತ್ ಝಾ ಎಂದು ವೈದ್ಯೆಯು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖವಾಗಿದೆ.
ಮಗುವಿನ ತಲೆಯೊಳಗೆ ಸಿಕ್ಕಿಕೊಂಡ ಪ್ರೆಶರ್ ಕುಕ್ಕರ್…! ಕಂದನ ಪಾಲಿಗೆ ಅಪತ್ಬಾಂಧವರಾದ ವೈದ್ಯರು
ಮೊದಲು 30 ಸಾವಿರ ರೂ.ಗಳನ್ನು ಪಡೆದು ಪೂಜೆ ಮಾಡಿದ್ದ ಜ್ಯೋತಿಷಿಯು, ವೈದ್ಯೆಯು ಪರೀಕ್ಷೆಯಲ್ಲಿ ಫೇಲ್ ಆದ ಕೂಡಲೇ ಇನ್ನೂ ದೊಡ್ಡ ಪೂಜೆ ಮಾಡುವುದಕ್ಕೆ 50 ಸಾವಿರ ರೂ. ಬೇಡಿಕೆ ಇಟ್ಟಿದ್ದ. ಸೈಬರಾಬಾದ್ ಪೊಲೀಸರು ಕಳ್ಳ ಜ್ಯೋತಿಷಿಯ ಬೆನ್ನತ್ತಿದ್ದಾರೆ.