alex Certify ಕೊರೊನಾ ಸೋಂಕಿತರಿಂದ ಕೇವಲ 10 ರೂ. ಶುಲ್ಕ ಪಡೆಯುತ್ತಿರುವ ವೈದ್ಯ ದಂಪತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸೋಂಕಿತರಿಂದ ಕೇವಲ 10 ರೂ. ಶುಲ್ಕ ಪಡೆಯುತ್ತಿರುವ ವೈದ್ಯ ದಂಪತಿ…!

ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ಮಂದಿಯ ನೆರವಿಗೆ ನಿಂತಿರುವ ವೈದ್ಯ ದಂಪತಿಗಳಿಬ್ಬರು ಸೋಂಕಿನ ವಿರುದ್ಧ ದೇಶದ ಹೋರಾಟಕ್ಕೆ ಇನ್ನಷ್ಟು ಬಲ ತುಂಬಿದ್ದಾರೆ.

ತೆಲಂಗಾಣದ ಪೆದ್ದಪಲ್ಲಿ ಎಂಬ ಗ್ರಾಮದಲ್ಲಿ ರೋಗಿಗಳ ಆರೈಕೆ ಮಾಡುತ್ತಿರುವ ಈ ವೈದ್ಯ ದಂಪತಿ ತಮ್ಮ ಸೇವೆಗೆ ಕೇವಲ 10 ರೂ.ಗಳನ್ನು ಮಾತ್ರವೇ ಚಾರ್ಜ್ ಮಾಡುತ್ತಾರೆ. ಈ ಊರಿನ ಗ್ರಾಮಸ್ಥರಿಗೂ ವೈದ್ಯ ದಂಪತಿಯನ್ನು ಕಂಡರೆ ಅಷ್ಟೇ ಗೌರವ ಹಾಗೂ ಅಕ್ಕರೆ.

ಕೋವಿಡ್ ಸಾಂಕ್ರಮಿಕದ ಕಾಲಘಟ್ಟದಲ್ಲಿ ಸಮಾಜದ ಎಲ್ಲ ವರ್ಗಗಳಿಗೂ ತಲುಪಬೇಕೆಂಬ ಉದ್ದೇಶದಿಂದ ತಮ್ಮ ಕನ್ಸಲ್ಟೇಷನ್ ಶುಲ್ಕವನ್ನು 300 ರೂ.ಗಳಿಂದ 10 ರೂ.ಗಳಿಗೆ ಇಳಿಸಿದ್ದಾರೆ ತೆಲಂಗಾಣದ ಈ ದಂಪತಿ.

ಆರ್ಥೋಪೆಡಿಶಿಯನ್ ಆಗಿರುವ ಡಾ. ರಾಜು ಹಾಗೂ ಜನರಲ್ ಫಿಸಿಷಿಯನ್ ಆಗಿರುವ ಅವರ ಪತ್ನಿ ಡಾ. ಪಾವನಿ ತಮ್ಮ ಸಮಾಜಕ್ಕೆ ಕೈಲಾದ ಮಟ್ಟದಲ್ಲಿ ಏನಾದರೂ ಮಾಡಲು ಚಿಂತಿಸಿ ಈ ಕಾರ್ಯಕ್ಕೆ ಮುಂದಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...