ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ಮಂದಿಯ ನೆರವಿಗೆ ನಿಂತಿರುವ ವೈದ್ಯ ದಂಪತಿಗಳಿಬ್ಬರು ಸೋಂಕಿನ ವಿರುದ್ಧ ದೇಶದ ಹೋರಾಟಕ್ಕೆ ಇನ್ನಷ್ಟು ಬಲ ತುಂಬಿದ್ದಾರೆ.
ತೆಲಂಗಾಣದ ಪೆದ್ದಪಲ್ಲಿ ಎಂಬ ಗ್ರಾಮದಲ್ಲಿ ರೋಗಿಗಳ ಆರೈಕೆ ಮಾಡುತ್ತಿರುವ ಈ ವೈದ್ಯ ದಂಪತಿ ತಮ್ಮ ಸೇವೆಗೆ ಕೇವಲ 10 ರೂ.ಗಳನ್ನು ಮಾತ್ರವೇ ಚಾರ್ಜ್ ಮಾಡುತ್ತಾರೆ. ಈ ಊರಿನ ಗ್ರಾಮಸ್ಥರಿಗೂ ವೈದ್ಯ ದಂಪತಿಯನ್ನು ಕಂಡರೆ ಅಷ್ಟೇ ಗೌರವ ಹಾಗೂ ಅಕ್ಕರೆ.
ಕೋವಿಡ್ ಸಾಂಕ್ರಮಿಕದ ಕಾಲಘಟ್ಟದಲ್ಲಿ ಸಮಾಜದ ಎಲ್ಲ ವರ್ಗಗಳಿಗೂ ತಲುಪಬೇಕೆಂಬ ಉದ್ದೇಶದಿಂದ ತಮ್ಮ ಕನ್ಸಲ್ಟೇಷನ್ ಶುಲ್ಕವನ್ನು 300 ರೂ.ಗಳಿಂದ 10 ರೂ.ಗಳಿಗೆ ಇಳಿಸಿದ್ದಾರೆ ತೆಲಂಗಾಣದ ಈ ದಂಪತಿ.
ಆರ್ಥೋಪೆಡಿಶಿಯನ್ ಆಗಿರುವ ಡಾ. ರಾಜು ಹಾಗೂ ಜನರಲ್ ಫಿಸಿಷಿಯನ್ ಆಗಿರುವ ಅವರ ಪತ್ನಿ ಡಾ. ಪಾವನಿ ತಮ್ಮ ಸಮಾಜಕ್ಕೆ ಕೈಲಾದ ಮಟ್ಟದಲ್ಲಿ ಏನಾದರೂ ಮಾಡಲು ಚಿಂತಿಸಿ ಈ ಕಾರ್ಯಕ್ಕೆ ಮುಂದಾಗಿದ್ದಾರೆ.