ಗಡ್ಡ ಬಿಡೋದು ಇತ್ತೀಚಿನ ದಿನಗಳಲ್ಲಿ ಫ್ಯಾಷನ್. ಇದು ಹುಡುಗ್ರ ಸೌಂದರ್ಯ ಹೆಚ್ಚಿಸುವ ಜೊತೆಗೆ ಹುಡುಗಿಯರನ್ನು ಆಕರ್ಷಿಸುತ್ತದೆ. ಗಡ್ಡ ಬಿಟ್ರೆ ಕೆಲಸ ಮುಗಿಯಲಿಲ್ಲ. ಗಡ್ಡದ ಆರೈಕೆ ಅತಿ ಮುಖ್ಯ. ಗಡ್ಡ ಬಿಡೋದು ಎಷ್ಟು ಸುಲಭವೋ ಅದ್ರ ಆರೈಕೆ ಅಷ್ಟೇ ಕಷ್ಟ. ಗಡ್ಡದ ಆರೈಕೆ ಹೇಗಿರಬೇಕು ಎಂಬುದನ್ನು ತಿಳಿದ್ರೆ ಸುಂದರ ಗಡ್ಡ ಹೊಂದಲು ಸಾಧ್ಯ.
ತಲೆ ಕೂದಲನ್ನು ಸ್ವಚ್ಚಗೊಳಿಸುವಂತೆ ಗಡ್ಡದ ಕೂದಲನ್ನು ಸ್ವಚ್ಚಗೊಳಿಸಬೇಕಾಗುತ್ತದೆ. ಹಾಗಾಗಿ ವಾರದಲ್ಲಿ ಒಂದು ಬಾರಿಯಾದ್ರೂ ಗಡ್ಡಕ್ಕೆ ಶಾಂಪೂ ಮಾಡೋದನ್ನು ಮರೆಯಬೇಡಿ.
ಗಡ್ಡಕ್ಕೆ ತಲೆಗೆ ಹಾಕುವ ಎಣ್ಣೆಯನ್ನು ಎಂದೂ ಹಾಕಬೇಡಿ. ತಲೆ ಚರ್ಮ ಹಾಗೂ ಮುಖದ ಚರ್ಮ ಭಿನ್ನವಾಗಿರುತ್ತದೆ. ಹಾಗಾಗಿ ಗಡ್ಡಕ್ಕೆಂದೇ ಮಾರುಕಟ್ಟೆಯಲ್ಲಿ ಬೇರೆ ಎಣ್ಣೆ ಸಿಗುತ್ತದೆ. ಅದನ್ನು ಬಳಸಿ.
ತೋಟದಲ್ಲಿ ಗಿಡ ನೆಟ್ಟಾಗ ಅದ್ರ ಸೌಂದರ್ಯ ಹೆಚ್ಚಿಸಲು ಆಗಾಗ ಅದನ್ನು ಕತ್ತರಿಸುತ್ತೇವೆ. ಹಾಗೆಯೇ ಗಡ್ಡವನ್ನು ಆಗಾಗ ಕತ್ತರಿಸಿ ಟ್ರಿಮ್ ಮಾಡಬೇಕಾಗುತ್ತದೆ. ಆಗ ಮಾತ್ರ ಗಡ್ಡದ ಸೌಂದರ್ಯ ಹೆಚ್ಚಾಗಲು ಸಾಧ್ಯ.
ಧೂಳು, ಕೊಳಕು ಗಡ್ಡಕ್ಕೆ ಅಂಟಿಕೊಳ್ಳುವುದು ಸಾಮಾನ್ಯ. ಹಾಗಾಗಿ ಪ್ರತಿ ದಿನ ಎರಡು ಬಾರಿ ಗಡ್ಡವನ್ನು ಸ್ವಚ್ಛಗೊಳಿಸಿಕೊಳ್ಳಿ.