alex Certify ಶೌಚಾಲಯದಲ್ಲಿ ಮೊಬೈಲ್ ಬಳಸ್ತೀರಾ…..? ಹಾಗಿದ್ರೆ ಹುಷಾರ್……! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶೌಚಾಲಯದಲ್ಲಿ ಮೊಬೈಲ್ ಬಳಸ್ತೀರಾ…..? ಹಾಗಿದ್ರೆ ಹುಷಾರ್……!

Why You Should Stop Using Your Phone in the Toilet - MedClique

ಇತ್ತೀಚಿನ ದಿನಗಳಲ್ಲಿ ಶೌಚಕ್ಕೆ ಹೋಗುವಾಗ ಮೊಬೈಲ್ ತೆಗೆದುಕೊಂಡು ಹೋಗುವ ಪ್ರವೃತ್ತಿ ಬೆಳೆಯುತ್ತಿದೆ. ಅದರಲ್ಲೂ ಪಾಶ್ಚಿಮಾತ್ಯ ಶೈಲಿಯ ಪಾಯಖಾನೆ ಇರುವವರಲ್ಲಿ ಅದು ಹೆಚ್ಚು.

ಆದರೆ ಈ ರೀತಿ ಶೌಚಾಲಯಕ್ಕೆ ಮೊಬೈಲ್ ಒಯ್ಯುವುದು ತುಂಬಾ ಅಪಾಯಕಾರಿಯಂತೆ. ಒಳಗೆ ಶೌಚ ಮಾಡುವಾಗ ಹಲವು ಬ್ಯಾಕ್ಟೀರಿಯಾ ಹಾಗೂ ರೋಗಾಣುಗಳು ಮೊಬೈಲ್ ಮೇಲೆ ಕುಳಿತುಕೊಳ್ಳುತ್ತವಂತೆ. ಆಮೇಲೆ ಸೋಪ್ ಹಾಕಿ ಕೈ ತೊಳೆದುಕೊಂಡರೂ ಉಪಯೋಗವಿಲ್ಲ. ಮೊಬೈಲ್ ಮೇಲಿನ ಬ್ಯಾಕ್ಟೀರಿಯಾ ಅಪಾಯಕಾರಿ.

ಅದರಲ್ಲೂ ಸಾರ್ವಜನಿಕ ಶೌಚಾಲಯದಲ್ಲಿ ಅಪಾಯದ ಪ್ರಮಾಣ ಇನ್ನೂ ಹೆಚ್ಚು. ಹಾಗೂ ಮೊಬೈಲ್ ಬಳಸುತ್ತಾ ಅದು ಬಿಸಿಯಾಗುವುದರಿಂದ ಬ್ಯಾಕ್ಟೀರಿಯಾ ಇನ್ನೂ ಹೆಚ್ಚಾಗುತ್ತವಂತೆ.

ಮೊಬೈಲ್ ಅಷ್ಟೇ ಅಲ್ಲ, ಟೂತ್ ಬ್ರಶ್, ಟವೆಲ್ ಕೂಡ ಬಾತ್ ರೂಮಿನಲ್ಲಿದ್ದರೆ ಅವುಗಳ ಮೇಲೂ ರೋಗಾಣುಗಳು ಕುಳಿತುಕೊಳ್ಳುತ್ತವೆ. ಅದಕ್ಕೆ ಅವುಗಳನ್ನೂ ಆದಷ್ಟು ಹೊರಗಿಡುವುದು ಒಳ್ಳೆಯದು ಎನ್ನುತ್ತಾರೆ ತಜ್ಞರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...