ಮೊಬೈಲ್ ಕ್ಯಾಮರಾ ಬಳಕೆ ಹೆಚ್ಚುತ್ತಿದ್ದಂತೆ ಆಹಾರ ಅಥವಾ ಕೆಲವು ಸೀನರಿಕ್ ಸ್ಥಳಗಳ ಚಿತ್ರಗಳನ್ನು ಕ್ಲಿಕ್ಕಿಸಿದ ನಂತರ ಹೆಚ್ಚಿನವರು ಹವ್ಯಾಸಿ ಛಾಯಾಗ್ರಾಹಕರಾಗಿಬಿಟ್ಟಿದ್ದಾರೆ. ಆದರೆ, ಹೆಸರು ಹೇಳಲಿಚ್ಛಿಸದ ರೆಡ್ಡಿಟ್ ಬಳಕೆದಾರರು ತೆಗೆದ ಚಿತ್ರವು ನೆಟ್ಟಿಗರಲ್ಲಿ ಸಾಕಷ್ಟು ಉನ್ಮಾದವನ್ನು ಸೃಷ್ಟಿಸಿದೆ. ಆ ಫೋಟೋ ನೆಟ್ಟಿಗರ ಪ್ರಕಾರ ವಿನ್ಸೆಂಟ್ ವ್ಯಾನ್ ಗಾಗ್ ಅವರ ಐಕಾನಿಕ್ ಪೇಂಟಿಂಗ್ ಅನ್ನು ಹೋಲುತ್ತದೆ.
ಸಾಯಿ ಪ್ರೀತಂ ಎಂಬವರು ರೆಡ್ಡಿಟ್ನ ಚಿತ್ರವನ್ನು ಟ್ವೀಟರ್ನಲ್ಲಿ ಹಂಚಿಕೊಂಡಿದ್ದು, ಅದರೊಟ್ಟಿಗೆ ವಿನ್ಸೆಂಟ್ ವ್ಯಾನ್ ಗಾಗ್ ಅವರ ಕೆಫೆ ಟೆರೇಸ್ ಅಟ್ ನೆೈಟ್ ಎಂಬ ವರ್ಣಚಿತ್ರದ ಚಿತ್ರವನ್ನು ಸಹ ಪೋಸ್ಟ್ ಮಾಡಿದ್ದಾರೆ.
ಅಪರಿಚಿತ ರೆಡ್ಡಿಟ್ ಬಳಕೆದಾರರು ಕ್ಲಿಕ್ ಮಾಡಿರುವ ಚಿತ್ರ ಬೆಂಗಳೂರಿನ ಕೋರಮಂಗಲದಲ್ಲಿರುವ ಕೆಫೆಯದ್ದಾಗಿದೆ. ಮತ್ತು ಇದು ನೆಟ್ಟಿಗರ ಪ್ರಕಾರ ಪ್ರಸಿದ್ಧ ಕಲಾವಿದನ 1888 ತೈಲ ವರ್ಣಚಿತ್ರಕ್ಕೆ ಹೋಲಿಕೆಯನ್ನು ಹೊಂದಿದೆ.
1888ರಲ್ಲಿ ವಿನ್ಸೆಂಟ್ ವ್ಯಾನ್ ಗಾಗ್ ಅವರ ಪ್ರಸಿದ್ಧ ಚಿತ್ರಕಲೆ ‘ಕೆಫೆ ಟೆರೇಸ್ ಅಟ್ ನೈಟ್’ ಅನ್ನು ರಚಿಸಿದ್ದರು.
ಈ ಪೋಟೊ ನೆಟ್ಟಿಗರನ್ನು ಪ್ರತಿಕ್ರಿಯೆ ಮಾಡುವಂತೆ ಪ್ರಚೋದಿಸಿತು. ಕೆಲವರು ಸಾಮ್ಯತೆ ಹತ್ತಿರದಲ್ಲಿದೆ ಎಂದರೆ ಕೆಲವರು ಒಪ್ಪಿಲ್ಲ.