alex Certify 52 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಈ ದೇಶದ ರಾಣಿ ದಿಢೀರ್ ಸಿಂಹಾಸನ ತ್ಯಜಿಸಿದ್ದರ ಹಿಂದಿದೆ ಈ ಕಾರಣ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

52 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಈ ದೇಶದ ರಾಣಿ ದಿಢೀರ್ ಸಿಂಹಾಸನ ತ್ಯಜಿಸಿದ್ದರ ಹಿಂದಿದೆ ಈ ಕಾರಣ….!

Danish Queen Margrethe announces surprise abdication after 52 years on the  throne

ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಡೆನ್ಮಾರ್ಕ್‌ನ ರಾಣಿ ಮಾರ್ಗರೆಟ್‌ ತಮ್ಮ ಸಿಂಹಾಸನವನ್ನೇ ತ್ಯಜಿಸಿದ್ದಾರೆ. ದಿಢೀರನೆ ಮಾರ್ಗರೆಟ್‌ ಗದ್ದುಗೆಯಿಂದ ಇಳಿದಿರೋದು ಕುತೂಹಲಕ್ಕೆ ಕಾರಣವಾಗಿದೆ. 2022ರ ಸೆಪ್ಟೆಂಬರ್‌ನಲ್ಲಿ ಬ್ರಿಟನ್‌ ರಾಣಿ ಎಲಿಜಬೆತ್ II ಅವರ ಮರಣದ ನಂತರ ಯುರೋಪ್‌ನಲ್ಲಿ ಸುದೀರ್ಘ ಆಳ್ವಿಕೆ ನಡೆಸಿದ ರಾಣಿ ಎನಿಸಿಕೊಂಡಿದ್ದರು ಮಾರ್ಗರೆಟ್‌.

ಡೆನ್ಮಾರ್ಕ್‌ನ ಗದ್ದುಗೆಯನ್ನು ರಾಣಿ ಮಾರ್ಗರೆಟ್‌ II 52 ವರ್ಷಗಳ ಕಾಲ ಆಳಿದ್ದಾರೆ. ಹೊಸವರ್ಷದ ಭಾಷಣದ ಸಂದರ್ಭದಲ್ಲಿ ಸಿಂಹಾಸನ ತ್ಯಜಿಸುವ ನಿರ್ಧಾರವನ್ನು ಘೋಷಿಸಿದ್ದಾರೆ. ಜನವರಿ 14 ರಂದು ಅಧಿಕಾರದಿಂದ ಕೆಳಗಿಳಿಯುವುದಾಗಿ ಪ್ರಕಟಿಸಿದ್ದಾರೆ. ರಾಣಿ ಮಾರ್ಗರೆಟ್‌ ಅವರ ಪುತ್ರ ಪ್ರಿನ್ಸ್ ಫ್ರೆಡೆರಿಕ್ ಗದ್ದುಗೆ ಏರಲಿದ್ದಾರೆ.

ಈ ಹಿಂದೆ 1972 ರಲ್ಲಿ ಕಿಂಗ್ ಫ್ರೆಡ್ರಿಕ್ IX ಅವರ ಮರಣದ ನಂತರ ಮಾರ್ಗರೆಟ್‌ ಅಧಿಕಾರ ವಹಿಸಿಕೊಂಡಿದ್ದರು. ಈಗ ಆಕೆಗೆ 83 ವರ್ಷ ವಯಸ್ಸು. ಡೆನ್ಮಾರ್ಕ್‌ ದೇಶದ ಇತಿಹಾಸದಲ್ಲಿ ದೀರ್ಘಕಾಲ ಆಳ್ವಿಕೆ ನಡೆಸಿದ ರಾಣಿ ಇವರು.

2023ರ ಆರಂಭದಲ್ಲಿ ರಾಣಿ ಮಾರ್ಗರೆಟ್‌ ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ವಿಶ್ರಾಂತಿ ಬಯಸಿರುವ ಅವರು ಗದ್ದುಗೆಯಿಂದ ಇಳಿಯುವ ನಿರ್ಧಾರ ತೆಗೆದುಕೊಂಡಿದ್ದಾರೆ. ಮುಂದಿನ ಪೀಳಿಗೆಗೆ ಜವಾಬ್ದಾರಿಯನ್ನು ಬಿಟ್ಟುಕೊಡುವ ಸಮಯ ಬಂದಿದೆ ಎಂದಿದ್ದಾರೆ.

ಡೆನ್ಮಾರ್ಕ್‌ ಜನತೆಗೆ ಧನ್ಯವಾದ ಅರ್ಪಿಸಿರೋ ಮಾರ್ಗರೆಟ್‌, ತಮ್ಮ ಪುತ್ರನಿಗೂ ಇದೇ ರೀತಿಯ ಬೆಂಬಲದ ನಿರೀಕ್ಷೆ ಮಾಡ್ತಿದ್ದಾರೆ. ಡೆನ್ಮಾರ್ಕ್‌ ದೇಶಕ್ಕಾಗಿ ತಮ್ಮ ಜೀವಮಾನದ ಸಮರ್ಪಣೆ ಮತ್ತು ದಣಿವರಿಯದ ಪ್ರಯತ್ನಗಳಿಗಾಗಿ ಮಹಾರಾಣಿಗೆ ಅಲ್ಲಿನ ಪ್ರಧಾನ ಮಂತ್ರಿ ಮೆಟ್ಟೆ ಫ್ರೆಡೆರಿಕ್ಸೆನ್ ಕೂಡ ಧನ್ಯವಾದ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...