alex Certify ನಿಮ್ಮ ಕನಸಿನಲ್ಲಿ ಶ್ರೀರಾಮ, ಹನುಮಂತ ಕಾಣಿಸಿಕೊಂಡರೆ ಏನರ್ಥ ಗೊತ್ತೇ..? ತಿಳಿಯಿರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಕನಸಿನಲ್ಲಿ ಶ್ರೀರಾಮ, ಹನುಮಂತ ಕಾಣಿಸಿಕೊಂಡರೆ ಏನರ್ಥ ಗೊತ್ತೇ..? ತಿಳಿಯಿರಿ

ಭಗವಾನ್ ರಾಮನನ್ನು ಹಿಂದೂ ಧರ್ಮದಲ್ಲಿ ಪ್ರತಿ ಮನೆಯಲ್ಲೂ ಪೂಜಿಸಲಾಗುತ್ತದೆ. ಈಗಂತೂ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗುತ್ತಿರುವ ಹಿನ್ನೆಲೆ ಎಲ್ಲೆಡೆ ರಾಮನ ಜಪ ತಪ ಆರಂಭವಾಗಿದೆ.

ನನ್ನ ಕನಸಿನಲ್ಲಿ ರಾಮ ಬಂದಿದ್ದ, ಹನುಮಂತ ಬಂದಿದ್ದ ಎಂದು ಹಲವರು ಹೇಳುವುದನ್ನು ನೀವು ಕೇಳಿದ್ದೀರಿ. ಅನೇಕ ಜನರ ಕನಸಿನಲ್ಲಿಯೂ ದೇವರುಗಳು ಕಾಣಿಸಿಕೊಳ್ಳುತ್ತಾರೆ. ನಾವು ನೋಡುವ ಕನಸುಗಳು ಭವಿಷ್ಯದ ಘಟನೆಗಳ ಮೇಲೆ ಪರಿಣಾಮ ಬೀರುತ್ತವೆ ಎಂದು ಕನಸಿನ ವಿಜ್ಞಾನ ಹೇಳುತ್ತದೆ.

ಕನಸಿನಲ್ಲಿ ರಾಮ ಮತ್ತು ಹನುಮಂತ

ನಿಮ್ಮ ಕನಸಿನಲ್ಲಿ ನೀವು ರಾಮ ಮತ್ತು ಹನುಮಂತನನ್ನು ಬಂದರೆ ನಿಮಗೆ ತುಂಬಾ ಒಳ್ಳೆಯದು, ಸ್ವಪ್ನ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯ ಕನಸಿನಲ್ಲಿ ಭಗವಾನ್ ರಾಮನು ಕಾಣಿಸಿಕೊಂಡರೆ, ಅದನ್ನು ಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆ ಕನಸನ್ನು ಕಂಡ ವ್ಯಕ್ತಿಯ ಜೀವನದಲ್ಲಿ ಸಾಕಷ್ಟ ಬದಲಾವಣೆಯಾಗಲಿದೆಯಂತೆ, ನೀವು ಕೆಲವು ಸಮಸ್ಯೆಗಳಲ್ಲಿ ಸಿಲುಕಿಕೊಂಡಿದ್ರೆ ಅದರಿಂದ ಪರಿಹಾರವನ್ನು ಪಡೆಯಲಿದ್ದೀರಂತೆ.

ನಿಮ್ಮ ಕನಸಿನಲ್ಲಿ ನೀವು ಭಗವಾನ್ ರಾಮನನ್ನು ನೋಡಿದ್ದರೆ, ಅದು ನಿಮಗೆ ಶುಭ ಸಂಕೇತವಾಗಿದೆ. ನೀವು ಶೀಘ್ರದಲ್ಲೇ ಯಶಸ್ಸಿನ ಏಣಿಯನ್ನು ಏರಲಿದ್ದೀರಿ. ನೀವು ಕೆಲವು ಕಷ್ಟಕರ ಸಮಸ್ಯೆಗಳಲ್ಲಿ ಸಿಲುಕಿಕೊಂಡರೆ, ನಿಮ್ಮ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಈ ಕನಸು ನಿಮ್ಮನ್ನು ದುಃಖಗಳಿಂದ ಮುಕ್ತಗೊಳಿಸುತ್ತದೆ.

ರಾಮನ ದೇವಾಲಯ

ಕನಸಿನಲ್ಲಿ ಶ್ರೀರಾಮನ ದೇವಾಲಯವನ್ನು ನೀವು ನೋಡಿದರೆ ಅದು ತುಂಬಾ ಶುಭಶಕುನವೆಂದು ಪರಿಗಣಿಸಲಾಗುತ್ತದೆ. ಅಂದರೆ ನಿಮ್ಮ ದುರಾದೃಷ್ಟವು ದೂರಾಗಿ ಅದೃಷ್ಟವು ನಿಮ್ಮ ಕೈ ಹಿಡಿಯಲಿದೆಯಂತೆ. ಅಲ್ಲದೇ ಕನಸಿನಲ್ಲಿ ರಾಮನೊಂದಿಗೆ ಆಂಜನೇಯ ಸ್ವಾಮಿಯು ಕಾಣಿಸಿಕೊಂಡರೆ ಅದು ಬಹಳ ಶುಭ ಸಂಕೇತವಾಗಿದೆ. ಅಂದರೆ ಮುಂದಿನ ದಿನಗಳಲ್ಲಿ ನಿಮ್ಮೆಲ್ಲಾ ಒತ್ತಡಗಳಿಂದ ನೀವು ಹೊರ ಬರುತ್ತೀರಿ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...