alex Certify ಮುಖಕ್ಕೆ ಪದೆ ಪದೆ ಬ್ಲೀಚ್ ಮಾಡಿಸಿದರೆ ಏನಾಗುತ್ತದೆ ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಖಕ್ಕೆ ಪದೆ ಪದೆ ಬ್ಲೀಚ್ ಮಾಡಿಸಿದರೆ ಏನಾಗುತ್ತದೆ ಗೊತ್ತಾ…?

ಮುಖ ಬೆಳ್ಳಗಾಗಿ ಅಂದವಾಗಿ ಕಾಣಬೇಕೆಂದು ಎಲ್ಲಾ ಹೆಣ್ಣು ಮಕ್ಕಳು ಬಯಸುತ್ತಾರೆ. ಅದಕ್ಕಾಗಿ ಮುಖವನ್ನು ಆಗಾಗ ಬ್ಲೀಚ್ ಮಾಡಿಸುತ್ತಾರೆ. ಆದರೆ ಇದರಿಂದ ಹಲವು ಚರ್ಮದ ಸಮಸ್ಯೆಗಳು ಕಾಡುತ್ತವೆ. ಅದು ಯಾವುದೆಂಬುದನ್ನು ತಿಳಿದುಕೊಳ್ಳಿ.

*ಮಾರುಕಟ್ಟೆಯಲ್ಲಿ ಸಿಗುವ ಬ್ಲೀಚ್ ನಲ್ಲಿ ರಾಸಾಯನಿಕಗಳಿಂದ ತಯಾರಿಸಿರುತ್ತಾರೆ. ಇದರಿಂದ ಚರ್ಮದ ಮೇಲೆ ಅಲರ್ಜಿ, ದದ್ದು, ತುರಿಕೆ ಕಂಡುಬರುತ್ತದೆ. ಅಲ್ಲದೇ ಸುಡುವ ವೇದನೆಯು ಕಂಡುಬರುತ್ತದೆ. ಚರ್ಮ ಊದಿಕೊಳ್ಳುತ್ತದೆ.

* ಮಾರುಕಟ್ಟೆಯಲ್ಲಿ ಸಿಗುವ ಬ್ಲೀಚ್ ನಲ್ಲಿ ಹೈಡ್ರೋಜನ್ ಪೆರಾಕ್ಸೈಡ್ ನ್ನು ಮಿಕ್ಸ್ ಮಾಡಿರುತ್ತಾರೆ. ಇದು ನಿಮ್ಮ ಚರ್ಮವನ್ನು ಒಣಗಿಸುತ್ತದೆ. ಒಣ ಚರ್ಮ ಹೊಂದಿರುವವರು ಇದರಿಂದ ಹೆಚ್ಚಿನ ಸಮಸ್ಯೆಯನ್ನು ಅನುಭವಿಸುತ್ತಾರೆ.

*ಬ್ಲೀಚಿಂಗ್ ಚರ್ಮವನ್ನು ತೆಳ್ಳಗಾಗಿಸಿ ಸೂಕ್ಷ್ಮವಾಗಿಸುತ್ತದೆ. ಹಾಗಾಗಿ ಸೂರ್ಯನ ಬೆಳಕಿಗೆ ಹೋದಾಗ ಚರ್ಮ ಹೆಚ್ಚು ಸುಡುತ್ತದೆ ಮತ್ತು ಬೇಗನೆ ಕಪ್ಪಾಗುತ್ತದೆ.

*ಬ್ಲೀಚ್ ನಲ್ಲಿರುವ ಅಂಶ ಮೆಲಾನಿನ್ ಉತ್ಪಾದನೆಯನ್ನು ನಿಗ್ರಹಿಸುತ್ತದೆ. ಇದು ಚರ್ಮದ ಕ್ಯಾನ್ಸರ್ ಗೆ ಕಾರಣವಾಗುತ್ತದೆ. ಹಾಗೇ ಬ್ಲೀಚ್ ನಲ್ಲಿ ಬಳಸಿರುವ ಹೈಡ್ರೋಜನ್ ಪೆರಾಕ್ಸೈಡ್, ಬೆಂಜಾಯ್ಲ್ ಪೆರಾಕ್ಸೈಡ್ ಮತ್ತು ಫಾಸ್ಪರಿಕ್ ಆಮ್ಲ ಚರ್ಮದ ಕ್ಯಾನ್ಸರ್ ನ್ನು ಉಂಟುಮಾಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...