ಮುಖ ಬೆಳ್ಳಗಾಗಿ ಅಂದವಾಗಿ ಕಾಣಬೇಕೆಂದು ಎಲ್ಲಾ ಹೆಣ್ಣು ಮಕ್ಕಳು ಬಯಸುತ್ತಾರೆ. ಅದಕ್ಕಾಗಿ ಮುಖವನ್ನು ಆಗಾಗ ಬ್ಲೀಚ್ ಮಾಡಿಸುತ್ತಾರೆ. ಆದರೆ ಇದರಿಂದ ಹಲವು ಚರ್ಮದ ಸಮಸ್ಯೆಗಳು ಕಾಡುತ್ತವೆ. ಅದು ಯಾವುದೆಂಬುದನ್ನು ತಿಳಿದುಕೊಳ್ಳಿ.
*ಮಾರುಕಟ್ಟೆಯಲ್ಲಿ ಸಿಗುವ ಬ್ಲೀಚ್ ನಲ್ಲಿ ರಾಸಾಯನಿಕಗಳಿಂದ ತಯಾರಿಸಿರುತ್ತಾರೆ. ಇದರಿಂದ ಚರ್ಮದ ಮೇಲೆ ಅಲರ್ಜಿ, ದದ್ದು, ತುರಿಕೆ ಕಂಡುಬರುತ್ತದೆ. ಅಲ್ಲದೇ ಸುಡುವ ವೇದನೆಯು ಕಂಡುಬರುತ್ತದೆ. ಚರ್ಮ ಊದಿಕೊಳ್ಳುತ್ತದೆ.
* ಮಾರುಕಟ್ಟೆಯಲ್ಲಿ ಸಿಗುವ ಬ್ಲೀಚ್ ನಲ್ಲಿ ಹೈಡ್ರೋಜನ್ ಪೆರಾಕ್ಸೈಡ್ ನ್ನು ಮಿಕ್ಸ್ ಮಾಡಿರುತ್ತಾರೆ. ಇದು ನಿಮ್ಮ ಚರ್ಮವನ್ನು ಒಣಗಿಸುತ್ತದೆ. ಒಣ ಚರ್ಮ ಹೊಂದಿರುವವರು ಇದರಿಂದ ಹೆಚ್ಚಿನ ಸಮಸ್ಯೆಯನ್ನು ಅನುಭವಿಸುತ್ತಾರೆ.
*ಬ್ಲೀಚಿಂಗ್ ಚರ್ಮವನ್ನು ತೆಳ್ಳಗಾಗಿಸಿ ಸೂಕ್ಷ್ಮವಾಗಿಸುತ್ತದೆ. ಹಾಗಾಗಿ ಸೂರ್ಯನ ಬೆಳಕಿಗೆ ಹೋದಾಗ ಚರ್ಮ ಹೆಚ್ಚು ಸುಡುತ್ತದೆ ಮತ್ತು ಬೇಗನೆ ಕಪ್ಪಾಗುತ್ತದೆ.
*ಬ್ಲೀಚ್ ನಲ್ಲಿರುವ ಅಂಶ ಮೆಲಾನಿನ್ ಉತ್ಪಾದನೆಯನ್ನು ನಿಗ್ರಹಿಸುತ್ತದೆ. ಇದು ಚರ್ಮದ ಕ್ಯಾನ್ಸರ್ ಗೆ ಕಾರಣವಾಗುತ್ತದೆ. ಹಾಗೇ ಬ್ಲೀಚ್ ನಲ್ಲಿ ಬಳಸಿರುವ ಹೈಡ್ರೋಜನ್ ಪೆರಾಕ್ಸೈಡ್, ಬೆಂಜಾಯ್ಲ್ ಪೆರಾಕ್ಸೈಡ್ ಮತ್ತು ಫಾಸ್ಪರಿಕ್ ಆಮ್ಲ ಚರ್ಮದ ಕ್ಯಾನ್ಸರ್ ನ್ನು ಉಂಟುಮಾಡುತ್ತದೆ.