
ಮುಖಕ್ಕೆ ಎಣ್ಣೆ ಮಸಾಜ್ ಮಾಡಿದರೆ ಉತ್ತಮವೆಂದು ಹೇಳುತ್ತಾರೆ. ಬಾದಾಮಿ, ಆಲಿವ್ ಆಯಿಲ್, ತೆಂಗಿಣ್ಣೆಯಿಂದ ಮುಖ ಮಸಾಜ್ ಮಾಡಿದರೆ ಚರ್ಮದ ಸಮಸ್ಯೆಗಳು ದೂರವಾಗುತ್ತದೆ. ಹಾಗಾಗಿ ಫೇಸ್ ಆಯಿಲ್ ಮಸಾಜ್ ನಿಂದ ಯಾವೆಲ್ಲಾ ಪ್ರಯೋಜನವಿದೆ ಎಂಬುದನ್ನು ತಿಳಿದುಕೊಳ್ಳೋಣ.
*ಮುಖದ ಮಸಾಜ್ ಮಾಡುವುದರಿಂದ ರಕ್ತ ಸಂಚಾರ ಸರಾಗವಾಗಿ ಆಗುತ್ತದೆ. ವಯಸ್ಸಾದ ಚಿಹ್ನೆಗಳು ನಿವಾರಣೆಯಾಗುತ್ತದೆ.
*ಒರಟು ಚರ್ಮದ ಸಮಸ್ಯೆಯನ್ನು ನಿವಾರಿಸುತ್ತದೆ. ಇದು ಚರ್ಮವನ್ನು ತೇವಾಂಶಗೊಳಿಸಿ ಸತ್ತ ಚರ್ಮವನ್ನು ನಿವಾರಿಸಿ ಹೊಸ ಚರ್ಮ ಕೋಶಗಳ ರಚನೆಗೆ ಸಹಾಯ ಮಾಡುತ್ತದೆ.
*ಚರ್ಮದಲ್ಲಿರುವ ವಿಷವನ್ನು ಹೊರಹಾಕುತ್ತದೆ. ಚರ್ಮದ ರಂಧ್ರಗಳನ್ನು ಸ್ವಚ್ಛಗೊಳಿಸುತ್ತದೆ. ಮೊಡವೆ ಮತ್ತು ಕಲೆಗಳನ್ನು ನಿವಾರಿಸುತ್ತದೆ.
*ಫೇಸ್ ಮಸಾಜ್ ನಿಂದ ಚರ್ಮದಲ್ಲಿರುವ ನೋವು ಕಡಿಮೆಯಾಗುತ್ತದೆ. ಸ್ನಾಯುಗಳನ್ನು ಸಡಿಲಗೊಳಿಸುತ್ತದೆ.