alex Certify ಖಾಲಿ ಹೊಟ್ಟೆಯಲ್ಲಿ ಈ ʼತರಕಾರಿʼ ಸೇವಿಸುವುದರಿಂದ ಎಷ್ಟು ಪ್ರಯೋನವಿದೆ ಗೊತ್ತಾ……? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖಾಲಿ ಹೊಟ್ಟೆಯಲ್ಲಿ ಈ ʼತರಕಾರಿʼ ಸೇವಿಸುವುದರಿಂದ ಎಷ್ಟು ಪ್ರಯೋನವಿದೆ ಗೊತ್ತಾ……?

ಬೀಟ್‌ರೂಟ್‌ ನೆಲದೊಳಗೆ ಬೆಳೆಯುವಂಥ ತರಕಾರಿ. ಇದರಿಂದ ಸಾಂಬಾರ್‌, ಪಲ್ಯ, ಸಲಾಡ್‌ ಹೀಗೆ ಅನೇಕ ಭಕ್ಷ್ಯಗಳನ್ನು ಮಾಡಬಹುದು. ಬೀಟ್ರೂಟ್‌ ಜ್ಯೂಸ್‌ ಕೂಡ ಬಹಳ ಫೇಮಸ್‌. ಬಹುತೇಕ ಎಲ್ಲರೂ ಇದನ್ನು ಇಷ್ಟಪಡ್ತಾರೆ. ಇದರಲ್ಲಿ ಪೋಷಕಾಂಶಗಳ ಕೊರತೆಯಿಲ್ಲ. ಫೈಬರ್ ಜೊತೆಗೆ ನೈಸರ್ಗಿಕ ಸಕ್ಕರೆ, ಮೆಗ್ನೀಸಿಯಮ್, ಸೋಡಿಯಂ ಮತ್ತು ಪೊಟ್ಯಾಸಿಯಮ್ ಕೂಡ ಇದರಲ್ಲಿ ಕಂಡುಬರುತ್ತದೆ. ಬೀಟ್ರೂಟ್‌ ನಮ್ಮ ಆರೋಗ್ಯಕ್ಕೆ ಎಲ್ಲಾ ರೀತಿಯಲ್ಲೂ ಪ್ರಯೋಜನಕಾರಿಯಾಗಿ ಕೆಲಸ ಮಾಡುತ್ತದೆ. ನೀವು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಬೀಟ್ರೂಟ್ ಸೇವಿಸಿದರೆ ಅದರ ಪರಿಣಾಮ ನಿಮಗೇ ಅಚ್ಚರಿ ಮೂಡಿಸಬಹುದು.

1. ಮೂತ್ರದ ಸೋಂಕುಗಳು

ಭಾರತದಲ್ಲಿ ಅನೇಕ ಜನರು ಮೂತ್ರದ ಸೋಂಕಿನ ಸಮಸ್ಯೆಯನ್ನು ಎದುರಿಸುತ್ತಾರೆ. ಮೂತ್ರ ಮಾಡುವಾಗ ಉರಿ, ಅದಕ್ಕೆ ಸಂಬಂಧಿಸಿದ ಇತರ ಸೋಂಕುಗಳಿಗೆ ತುತ್ತಾಗುತ್ತಾರೆ. ಈ ಸಮಸ್ಯೆಯಿಂದ ಪಾರಾಗಲು ಬೆಳಗ್ಗೆ ಬೀಟ್ರೂಟ್ ಜ್ಯೂಸ್ ಕುಡಿಯಿರಿ. ಇದರಿಂದ ಮೂತ್ರಕ್ಕೆ ಸಂಬಂಧಪಟ್ಟ ಸೋಂಕುಗಳು ನಿವಾರಣೆಯಾಗುತ್ತವೆ.

2. ಡಿಹೈಡ್ರೇಶನ್‌ನಿಂದ ಪರಿಹಾರ

ನಮ್ಮ ದೇಹದ ಹೆಚ್ಚಿನ ಭಾಗವು ನೀರಿನಿಂದ ಮಾಡಲ್ಪಟ್ಟಿದೆ.  ಆದ್ದರಿಂದ ದೇಹದಲ್ಲಿ ದ್ರವದ ಕೊರತೆ ಇರಬಾರದು. ಡಿಹೈಡ್ರೇಶನ್‌ನಿಂದ ಅನೇಕ ರೀತಿಯ ಇತರ ಸಮಸ್ಯೆಗಳಾಗುತ್ತವೆ. ಹಾಗಾಗಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೀಟ್‌ರೂಟ್‌ ಸೇವಿಸಿ. ಈ ತೊಂದರೆಗೆ ಪರಿಹಾರ ಸಿಗುತ್ತದೆ.

3. ತೂಕ ಇಳಿಕೆಗೆ ಸಹಕಾರಿ

ತೂಕ ಹೆಚ್ಚಳ, ಹೊಟ್ಟೆ ಮತ್ತು ಸೊಂಟದ ಕೊಬ್ಬು ಹೆಚ್ಚಾಗಿ ತೊಂದರೆ ಅನುಭವಿಸುತ್ತಿರುವವರು ಬೆಳಗ್ಗೆ ಬೀಟ್ರೂಟ್ ತಿನ್ನಬೇಕು. ಏಕೆಂದರೆ ಅದರಲ್ಲಿ ಸಾಕಷ್ಟು ಫೈಬರ್ ಅಂಶವಿರುತ್ತದೆ. ಇದರಿಂದಾಗಿ ದೀರ್ಘಕಾಲ ಹಸಿವು ಇರುವುದಿಲ್ಲ ಮತ್ತು ಅತಿಯಾಗಿ ತಿನ್ನುವುದರಿಂದ ನೀವು ಪಾರಾಗುತ್ತೀರಿ.

4. ಪೋಷಕಾಂಶಗಳ ಹೀರಿಕೊಳ್ಳುವಿಕೆ

ಬೀಟ್ರೂಟ್ ಸ್ವತಃ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಹೆಚ್ಚಿನ ಆರೋಗ್ಯ ತಜ್ಞರು ಬೆಳಗ್ಗೆ ಎದ್ದ ನಂತರ ಖಾಲಿ ಹೊಟ್ಟೆಯಲ್ಲಿ ಇದನ್ನು ತಿನ್ನುವಂತೆ ಶಿಫಾರಸು ಮಾಡುತ್ತಾರೆ. ಏಕೆಂದರೆ ಈ ರೀತಿ ಮಾಡುವುದರಿಂದ ಪೋಷಕಾಂಶಗಳ ಹೀರಿಕೊಳ್ಳುವಿಕೆಯು ಸುಧಾರಿಸುತ್ತದೆ. ನಿಮ್ಮ ದೇಹದಲ್ಲಿ ಪೋಷಕಾಂಶಗಳ ಕೊರತೆಯಾಗುವುದಿಲ್ಲ. ವಿಶೇಷವಾಗಿ ಜೀವಸತ್ವಗಳು ಮತ್ತು ಖನಿಜಗಳ ಹೀರಿಕೊಳ್ಳುವಿಕೆಯು ಸುಲಭವಾಗಿರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...