ನಿಮ್ಮ ಶರ್ಟ್ ಹಿಂಭಾಗದಲ್ಲಿರುವ ಚಿಕ್ಕ ಕುಣಿಕೆಯನ್ನು ಎಂದಾದ್ರೂ ಗಮನಿಸಿದ್ದೀರಾ? ಅದನ್ನು ಸುಖಾಸುಮ್ಮನೆ ಇಟ್ಟಿರ್ತಾರೆ ಅಂದ್ಕೋಬೇಡಿ, ಲೂಪ್ ಇಡೋದಕ್ಕೂ ಒಂದು ಕಾರಣವಿದೆ.
ಪುರುಷರ ಫ್ಯಾಷನ್ ದಿನೇ ದಿನೇ ಬದಲಾದ್ರೂ ಆ ಲೂಪ್ ಮಾತ್ರ 1960ರಿಂದ್ಲೂ ಹಾಗೇ ಉಳಿದುಕೊಂಡಿದೆ. ಈಸ್ಟ್ ಕೋಸ್ಟ್ ನಾವಿಕರಿಗಾಗಿ ಶರ್ಟ್ ಅನ್ನು ಈ ರೀತಿಯಾಗಿ ವಿನ್ಯಾಸ ಮಾಡಲಾಗಿತ್ತು.
ಹ್ಯಾಂಗರ್ ಗಳ ಬದಲು ಅವರು ತಮ್ಮ ಅಂಗಿಯನ್ನು ತಂತಿಗಳ ಮೇಲೆ ನೇತು ಹಾಕಲು ಅನುಕೂಲವಾಗುವಂತೆ ವಿನ್ಯಾಸ ಮಾಡಲಾಗಿದೆ. ಕುಣಿಕೆಗಳ ಮೂಲಕ ನೇತು ಹಾಕಿಟ್ಟರೆ ಶರ್ಟ್ ಮುದುಡಿ ಹೋಗುವುದಿಲ್ಲ, ನಾವಿಕರು ಅದನ್ನು ಮರುದಿನ ಧರಿಸಬಹುದು ಅನ್ನೋದು ಕುಣಿಕೆ ಇಟ್ಟಿರುವ ಉದ್ದೇಶ.
ಅಂಗಿಗಳ ಹಿಂಭಾಗದಲ್ಲಿ ಕುಣಿಕೆ ಇಡುವ ಟ್ರೆಂಡ್ ಸಮುದ್ರದಿಂದ ನಗರಗಳತ್ತ ಪಸರಿಸಿತು. 1960 ರಲ್ಲಿ ಅಮೆರಿಕ, ಇಂತಹ ಶರ್ಟ್ ಗಳನ್ನು ತಯಾರಿಸಲು ಆರಂಭಿಸಿತು. ಜಿಮ್ ಲಾಕರ್ ಗಳಲ್ಲಿ ತಮ್ಮ ಅಂಗಿಯನ್ನು ನೇತುಹಾಕಲು ಪುರುಷರು ಕುಣಿಕೆಯನ್ನು ಬಳಸುತ್ತಿದ್ರು.