ತೂಕ ನಷ್ಟಕ್ಕೆ ಬ್ಲ್ಯಾಕ್ ಟೀ, ಇತರ ಗಿಡಮೂಲಿಕೆ ಟೀಗಳನ್ನು ಸೇವಿಸಲು ಹೇಳುತ್ತಾರೆ. ಆದರೆ ಹಾಲಿನಿಂದ ತಯಾರಿಸಿದ ಟೀ ಕುಡಿಯಬಾರದೆಂದು ಹೇಳುತ್ತಾರೆ. ಯಾಕೆಂದರೆ ಹಾಲಿನಲ್ಲಿ ಕೊಬ್ಬಿನಾಂಶ ಹೆಚ್ಚಾಗಿದ್ದು, ಇದು ತೂಕವನ್ನು ಹೆಚ್ಚಿಸುತ್ತದೆ. ಆದರೆ ಹಾಲಿನಿಂದ ತಯಾರಿಸಿದ ಟೀಯ ಮೂಲಕ ತೂಕವನ್ನು ಇಳಿಸಿಕೊಳ್ಳಬಹುದು. ಅದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.
2 ಕಪ್ಪು ನೀರಿಗೆ ½ ಇಂಚು ಶುಂಠಿ, ½ ಇಂಚು ದಾಲ್ಚಿನ್ನಿ ಹಾಕಿ 2 ನಿಮಿಷ ಕುದಿಸಿ. ನಂತರ ಚಹಾ ಎಲೆಗಳನ್ನು ಮತ್ತು ಹಾಲು ಸೇರಿಸಿ ಕುದಿಸಿ. ಬಳಿಕ ಚಹಾವನ್ನು ಸೋಸಿ ಅದಕ್ಕೆ ½ ಚಮಚ ಬೆಲ್ಲ ಮತ್ತು ½ ಚಮಚ ಕೋಕೋ ಪೌಡರ್ ನ್ನು ಮಿಕ್ಸ್ ಮಾಡಿ ಸೇವಿಸಿ.
ಈ ಚಹಾದಲ್ಲಿ ಹಾಲಿನ ಜೊತೆಗೆ ಶುಂಠಿ, ದಾಲ್ಚಿನ್ನಿ ಮತ್ತು ಬೆಲ್ಲ ಸೇರಿಸಿದ್ದರಿಂದ ಇದು ತೂಕ ಹೆಚ್ಚಳವಾಗುವುದನ್ನು ತಡೆಯುತ್ತದೆ.