alex Certify ʼಸೋನ್​ ಪಾಪಡಿʼ ಪ್ರಿಯರು ನೀವಾಗಿದ್ದರೆ ನೋಡಲೇಬೇಕು ಈ ವಿಡಿಯೋ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಸೋನ್​ ಪಾಪಡಿʼ ಪ್ರಿಯರು ನೀವಾಗಿದ್ದರೆ ನೋಡಲೇಬೇಕು ಈ ವಿಡಿಯೋ…!

ಸಿಹಿ ಪ್ರಿಯರು ಸೋನ್​ ಪಾಪಡಿಗೆ ಇಲ್ಲ ಎಂದು ಹೇಳುವ ಮಾತೇ ಇಲ್ಲ. ಯಾವುದೇ ಬೇಕರಿಗೆ ಹೋದರೂ ನಿಮಗೆ ಈ ಸೋನ್​ ಪಾಪಡಿ ಸಿಕ್ಕೇ ಸಿಗುತ್ತದೆ. ದೀಪಾವಳಿ ಹಬ್ಬದಂತಹ ಸಂದರ್ಭದಲ್ಲಂತೂ ಸಿಹಿ ವಿನಿಮಯ ಮಾಡಿಕೊಳ್ಳುವ ರೂಪದಲ್ಲಿ ಸೋನ್​ ಪಾಪಡಿ ಡಬ್ಬಿ ನೀಡುವುದು ಸರ್ವೆ ಸಾಮಾನ್ಯ.

ಆದರೆ ಈ ಸೋನ್​ ಪಾಪಡಿ ಹೇಗೆ ಮಾಡ್ತಾರೆ ಅನ್ನೋದನ್ನು ಎಂದಾದರೂ ಯೋಚಿಸಿದ್ದೀರಾ..?ಬಾಯಲ್ಲಿ ನೀರೂರಿಸುವ ಈ ತಿಂಡಿಯನ್ನ ಹೇಗೆ ಮಾಡ್ತಾರೆ ಎಂಬ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ʼಇಂಡಿಯಾ ಈಟ್​ ಮೇನಿಯಾʼ ಎಂಬ ಯುಟ್ಯೂಬ್​ ಚಾನೆಲ್​ನಲ್ಲಿ ಈ ವಿಡಿಯೋವನ್ನು ಶೇರ್​ ಮಾಡಲಾಗಿದೆ. ಗುಜರಾತ್​​ನ ಮೆಗಾ ಕಿಚನ್​ ಫ್ಯಾಕ್ಟರಿಯಲ್ಲಿ ಈ ವಿಡಿಯೋವನ್ನು ಚಿತ್ರೀಕರಿಸಲಾಗಿದೆ. ಇದು ಸದ್ಯ ಯುಟ್ಯೂಬ್​ನಲ್ಲಿ ಸಖತ್​ ಟ್ರೆಂಡಿಂಗ್ ​ನಲ್ಲಿದ್ದು 62 ಮಿಲಿಯನ್​ಗೂ ಅಧಿಕ ವೀವ್ಸ್​ ಸಂಪಾದಿಸಿದೆ.

ಈ ವಿಡಿಯೋದಲ್ಲಿ 4 ಕೆಜಿ ಸೋನ್​​ ಪಾಪಡಿಯನ್ನು ತಯಾರಿಸಲಾಗಿದೆ. ಮೊದಲು ಸಕ್ಕರೆ ಪಾಕವನ್ನು ತಯಾರಿಸಿ ಬಳಿಕ ಅದನ್ನು ತಣ್ಣಗಾಗಲು ಬಿಡುತ್ತಾರೆ. ಇದಾದ ಬಳಿಕ ನಾಲ್ವರು ಕೆಲಸಗಾರರು ಸೇರಿ ಈ ಸಕ್ಕರೆ ಪಾಕಕ್ಕೆ ಸೋನ್​ ಪಾಪಡಿ ರೂಪವನ್ನು ನೀಡುತ್ತಾ ಹೋಗುತ್ತಾರೆ.

ಮಧ್ಯದಲ್ಲಿ ಕಡ್ಲೆ ಹಿಟ್ಟಿಗೆ ಡ್ರೈ ಫ್ರೂಟ್ಸ್​ ಹಾಗೂ ತುಪ್ಪವನ್ನು ಹಾಕಿದ ಮಿಶ್ರಣವನ್ನು ಸೇರಿಸಲಾಗುತ್ತದೆ. ಕ್ರಮೇಣ ಸಕ್ಕರೆ ಪಾಕವು ದಾರದ ರೀತಿಯಲ್ಲಿ ಎಳೆ ಎಳೆಯಾಗಿ ಕಾಣಿಸಿಕೊಳ್ಳುತ್ತದೆ. ಬಳಿಕ ಇದನ್ನು ಮೌಲ್ಡ್​ನಲ್ಲಿ ಹಾಕಿ ಸರಿಯಾದ ಆಕಾರ ನೀಡಲಾಗುತ್ತದೆ. ಸೋನ್​ ಪಾಪಡಿಯನ್ನು ಬಾಕ್ಸ್​ಗೆ ಹಾಕಿ ಪ್ಯಾಕ್​ ಮಾಡುವ ದೃಶ್ಯ ಕೂಡ ವಿಡಿಯೋದಲ್ಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...