ರಾತ್ರಿ ಮಲಗುವ ಕೋಣೆ ಕತ್ತಲಾಗಿರಬೇಕು. ಆಗ ಚೆನ್ನಾಗಿ ನಿದ್ರಿಸಬಹುದು. ಆದರೆ ಕೆಲವರಿಗೆ ಲೈಟ್ ಹಾಕಿಕೊಂಡೇ ಮಲಗುವ ಅಭ್ಯಾಸವಿರುತ್ತದೆ. ಆದರೆ ಈ ರೀತಿ ಲೈಟ್ ಹಾಕಿಕೊಂಡು ಮಲಗುವ ಅಭ್ಯಾಸ ಆರೋಗ್ಯಕ್ಕೆ ಹಾನಿಕರ. ದೀಪ ಹಚ್ಚಿಕೊಂಡೇ ನಿದ್ರಿಸುವುದರಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಾಗುತ್ತವೆ.
ಖಿನ್ನತೆ
ದೀರ್ಘಕಾಲದವರೆಗೆ ಬೆಳಕಿನಲ್ಲಿ ನಿದ್ರಿಸಿದರೆ ಅದು ಖಿನ್ನತೆಗೆ ಕಾರಣವಾಗಬಹುದು. ಬೆಳಕಿನ ಕಾರಣದಿಂದಾಗಿ ನಿದ್ರೆಯು ಅಪೂರ್ಣವಾಗಿ ಉಳಿಯುತ್ತದೆ, ಇದು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಆಯಾಸ
ದೀಪಗಳನ್ನು ಬೆಳಗಿಸಿ ಮಲಗುವುದರಿಂದ ನಿದ್ರೆ ಸರಿಯಾಗಿ ಬರುವುದಿಲ್ಲ. ಇದರಿಂದ ಆಲಸ್ಯ ಮತ್ತು ಆಯಾಸ ಅನುಭವಿಸುತ್ತೇವೆ. ಇದು ನಮ್ಮ ಕೆಲಸದ ಮೇಲೂ ಪರಿಣಾಮ ಬೀರುತ್ತದೆ.
ಬೊಜ್ಜು ಹೆಚ್ಚಳ
ರಾತ್ರಿ ಲೈಟ್ ಆನ್ ಮಾಡಿ ಮಲಗಿದರೆ ಅದು ಬೊಜ್ಜನ್ನು ಹೆಚ್ಚಿಸಬಹುದು. ಏಕೆಂದರೆ ದೀಪಗಳನ್ನು ಹಚ್ಚಿ ಮಲಗುವುದರಿಂದ ಆಗಾಗ ನಮ್ಮ ನಿದ್ದೆಗೆ ಭಂಗ ಉಂಟಾಗುತ್ತದೆ ಮತ್ತು ಹಸಿವಾಗುತ್ತದೆ.
ಮರೆವು
ರಾತ್ರಿ ಲೈಟ್ ಬೆಳಕಿನಲ್ಲಿ ಮಲಗುವುದರಿಂದ ಮರೆವಿನ ಸಮಸ್ಯೆ ಕಾಡಬಹುದು. ನಿದ್ದೆ ಸರಿಯಾಗಿ ಆಗದೇ ಇದ್ದಾಗ ಕಿರಿಕಿರಿ ಉಂಟಾಗುತ್ತದೆ. ಇದರಿಂದ ಒಂಟಿತನ ಕಾಡಬಹುದು. ಜೊತೆಗೆ ಇದು ನೆನಪಿನ ಶಕ್ತಿಯ ಮೇಲೂ ಪರಿಣಾಮ ಬೀರಬಹುದು.ಅಷ್ಟೇ ಅಲ್ಲ ದೀಪಗಳನ್ನು ಹಚ್ಚಿ ಮಲಗುವುದರಿಂದ ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೂ ತುತ್ತಾಗಬಹುದು.