alex Certify ಊಟವಾದ ತಕ್ಷಣ ನೀರು ಕುಡಿಯುವ ಅಭ್ಯಾಸವಿದೆಯೇ ? ಹಾಗಾದ್ರೆ ತಪ್ಪದೆ ಇದನ್ನೋದಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಊಟವಾದ ತಕ್ಷಣ ನೀರು ಕುಡಿಯುವ ಅಭ್ಯಾಸವಿದೆಯೇ ? ಹಾಗಾದ್ರೆ ತಪ್ಪದೆ ಇದನ್ನೋದಿ…!

ನೀರಿಲ್ಲದೆ ನಾವು ಬದುಕುವುದೇ ಅಸಾಧ್ಯ. ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ಅನೇಕ ರೋಗಗಳಿಂದ ದೂರವಿರಬಹುದು. ಕಾಯಿಲೆಗಳಿಂದ ಬಚಾವ್‌ ಆಗಲು ದೇಹವನ್ನು ಹೈಡ್ರೇಟ್‌ ಆಗಿಟ್ಟುಕೊಳ್ಳಬೇಕು.

ಇದಕ್ಕಾಗಿ ದಿನವಿಡೀ ಚೆನ್ನಾಗಿ ನೀರು ಕುಡಿಯುವುದು ಅವಶ್ಯಕ. ನೀರನ್ನು ಎಷ್ಟು ಪ್ರಮಾಣದಲ್ಲಿ ಮತ್ತು ಯಾವಾಗ ಕುಡಿಯಬೇಕು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಕೆಲವರು ಊಟದ ಜೊತೆಗೆ ನೀರು ಕುಡಿದರೆ ಇನ್ನು ಕೆಲವರು ಊಟವಾದ ತಕ್ಷಣ ನೀರು ಕುಡಿಯುವ ಅಭ್ಯಾಸ ಮಾಡಿಕೊಂಡಿರುತ್ತಾರೆ, ಆದರೆ ಇವೆರಡೂ ಆರೋಗ್ಯಕ್ಕೆ ಅಪಾಯಕಾರಿ.

ಆಹಾರ ಸೇವಿಸಿದ ತಕ್ಷಣ ನೀರು ಕುಡಿಯುವುದು ಹಾನಿಕಾರಕ. ಇದರಿಂದ ಅನೇಕ ಸಮಸ್ಯೆಗಳು ಉಂಟಾಗಬಹುದು. ಆಹಾರ ಸೇವಿಸಿ ಸ್ವಲ್ಪ ಸಮಯದ ನಂತರ ನೀರು ಕುಡಿಯುವಂತೆ ತಜ್ಞರು ಶಿಫಾರಸು ಮಾಡುತ್ತಾರೆ.

ತಿಂದ ತಕ್ಷಣ ನೀರು ಕುಡಿದರೆ ಜೀರ್ಣಕ್ರಿಯೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ ಮತ್ತು ಅನೇಕ ರೀತಿಯ ಕಾಯಿಲೆಗಳು ಬರಬಹುದು. ಊಟವಾಗಿ ಅರ್ಧಗಂಟೆ ಬಿಟ್ಟು ನೀರು ಕುಡಿಯಬೇಕು.

ಆಹಾರ ತಿಂದ ತಕ್ಷಣ ನೀರು ಕುಡಿಯುವುದರಿಂದ ಆಹಾರವನ್ನು ಜೀರ್ಣಿಸಿಕೊಳ್ಳುವ ನೈಸರ್ಗಿಕ ಸಮಯ ಬದಲಾಗುತ್ತದೆ. ಅಗತ್ಯಕ್ಕಿಂತ ಹೆಚ್ಚಾಗಿ ಹಸಿವಿನಿಂದ ಬಳಲುತ್ತಿದ್ದರೆ ಅತಿಯಾಗಿ ತಿನ್ನಲು ಪ್ರಾರಂಭಿಸುತ್ತೇವೆ. ಇದರಿಂದಾಗಿ ತೂಕ ಹೆಚ್ಚಾಗಬಹುದು, ಬೊಜ್ಜಿನ ಸಮಸ್ಯೆ ಬರಬಹುದು. ಇದರಿಂದ ಹೊಟ್ಟೆಯುಬ್ಬರದ ಸಮಸ್ಯೆಯೂ ಬರುತ್ತದೆ.

ಅಷ್ಟೇ ಅಲ್ಲ ಹೊಟ್ಟೆಯ ಸೆಳೆತ ಮತ್ತು ನೋವು ಪ್ರಾರಂಭವಾಗಬಹುದು. ಈ ಕಾರಣದಿಂದಾಗಿ ಇನ್ಸುಲಿನ್ ಸ್ಪೈಕ್ ಅಪಾಯವೂ ಇದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ  ಮಧುಮೇಹ ರೋಗಿಗಳು ಊಟವಾದ ತಕ್ಷಣ ನೀರು ಕುಡಿಯಬಾರದು.

ಯಾವಾಗ ನೀರು ಕುಡಿಯಬೇಕು ?

ಊಟವಾಗಿ ಕನಿಷ್ಠ 30 ನಿಮಿಷಗಳ ನಂತರ ನೀರು ಕುಡಿಯಬೇಕು. ಆಹಾರ ಸೇವಿಸುವ ಅರ್ಧ ಗಂಟೆ ಮೊದಲು ಸಹ ನೀರು ಕುಡಿಯಬಹುದು. ಆಹಾರವನ್ನು ಸೇವಿಸಿದ ನಂತರ ಮತ್ತು ನೀರು ಕುಡಿಯುವ ಮೊದಲು 10 ನಿಮಿಷಗಳ ನಡಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಇದರಿಂದ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ.

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...