
ಬೇಸಿಗೆ ಮತ್ತೆ ಬಂದಿದೆ. ತೆಳುವಿನ ಆರಾಮದಾಯಕ ಉಡುಪು ಧರಿಸುವುದರೊಂದಿಗೆ ಹೆಚ್ಚು ದ್ರವ ಪದಾರ್ಥಗಳನ್ನು ಸೇವಿಸುವುದರಿಂದ ದೇಹವನ್ನು ತಂಪಾಗಿಡಬಹುದು.
ಬೇಸಿಗೆಯಲ್ಲಿ ಚರ್ಮದ ರಕ್ಷಣೆ ಕೂಡ ಅತ್ಯಂತ ಮುಖ್ಯವಾಗುತ್ತದೆ.
ಸನ್ ಸ್ಕ್ರೀನ್ ಲೋಷನ್ ಆಯ್ಕೆ ಮಾಡುವಾಗ ಎಚ್ಚರವಿರಲಿ. ಚರ್ಮಕ್ಕೆ ಹೊಂದುವ ಸನ್ ಸ್ಕ್ರೀನ್ ಬಳಸಿ. ಎಣ್ಣೆ ತ್ವಚೆ ಇರುವವರು ಜೆಲ್ ಸನ್ ಸ್ಕ್ರೀನ್, ಒಣಚರ್ಮ ಇರುವವರು ಸನ್ ಸ್ಕ್ರೀನ್ ಬಳಸುವುದು ಉತ್ತಮ.
ಬೇಸಿಗೆಯಲ್ಲಿ ಕನಿಷ್ಠವೆಂದರೂ ದಿನದಲ್ಲಿ ಎರಡು ಬಾರಿ ಸನ್ ಸ್ಕ್ರೀನ್ ಬಳಸಬೇಕು. ಹೊರಹೋಗುವ 10 ನಿಮಿಷ ಮೊದಲೇ ಇದನ್ನು ಹಚ್ಚಿಕೊಳ್ಳಿ. ಬಿಸಿಲಿಗೆ ಕಪ್ಪು ಚುಕ್ಕೆ, ತುರಿಕೆ, ನವೆ ಉಂಟಾದರೆ ಮೊಸರು, ಟೊಮ್ಯಾಟೊ, ಲಿಂಬೆಹಣ್ಣಿನ ರಸವನ್ನು ತ್ವಚೆಗೆ ಲೇಪಿಸಿಕೊಳ್ಳಿ.
ಬೇಸಿಗೆಯಲ್ಲಿ ತ್ವಚೆ ಒಣಗದಂತೆ, ಹೊಳಪಿನಿಂದ ಕೂಡಿರಲು ಸಾಕಷ್ಟು ನೀರು ಕುಡಿಯಿರಿ. ಚರ್ಮದಲ್ಲಿ ತೇವಾಂಶ ಇರುವಂತೆ ನೋಡಿಕೊಳ್ಳಿ. ಸೆಕೆಯೆಂದು ತಂಪು ಪಾನೀಯ ಕುಡಿದರೆ ಅದರಿಂದ ಅಡ್ಡ ಪರಿಣಾಮಗಳೇ ಹೆಚ್ಚು.