ಚೆಕ್ ಮೂಲಕ ಹಣ ಪಾವತಿ ಮಾಡುತ್ತಿದ್ದರೆ, ಮೊದಲಿಗಿಂತ ಹೆಚ್ಚು ಜಾಗರೂಕರಾಗಿರುವ ಅವಶ್ಯಕತೆಯಿದೆ. ಭಾರತೀಯ ರಿಸರ್ವ್ ಬ್ಯಾಂಕ್, ಆಗಸ್ಟ್ 1 ರಿಂದ ಜಾರಿಗೆ ಬಂದ ಬ್ಯಾಂಕಿಂಗ್ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಆರ್‌ಬಿಐ ಈಗ ಬಲ್ಕ್ ಕ್ಲಿಯರಿಂಗ್ ಸೌಲಭ್ಯವನ್ನು ಒದಗಿಸಲು ನಿರ್ಧರಿಸಿದೆ. ನ್ಯಾಷನಲ್ ಆಟೋಮೇಟೆಡ್ ಕ್ಲಿಯರಿಂಗ್ ಹೌಸ್ ಈ ತಿಂಗಳಿನಿಂದ 24 ಗಂಟೆಯೂ ಕೆಲಸ ಮಾಡುತ್ತಿದೆ.
ನ್ಯಾಷನಲ್ ಆಟೋಮೇಟೆಡ್ ಕ್ಲಿಯರಿಂಗ್ ಹೌಸ್(NACH) ವಾರದಲ್ಲಿ ಏಳು ದಿನಗಳು ಮತ್ತು ದಿನದ 24 ಗಂಟೆ ಲಭ್ಯವಿದೆ. ಇದು ಜನರಿಗೆ ಪ್ರಯೋಜನ ನೀಡಲಿದೆ. ಆದ್ರೆ ಅಷ್ಟೇ ಜಾಗರೂಕತೆ ಮುಖ್ಯವಾಗಿದೆ. ಚೆಕ್ ಮತ್ತು ಇಎಂಐ ಮೂಲಕ ಹಣ ಪಾವತಿಸುವವರು ಎಚ್ಚರದಿಂದಿರಬೇಕು.
ಹೊಸ ನಿಯಮದ ಪ್ರಕಾರ, ಬ್ಯಾಂಕ್ ರಜಾದಿನಗಳಲ್ಲಿಯೂ ಚೆಕ್ ಕ್ಲಿಯರ್ ಮಾಡುತ್ತದೆ. ಹಾಗಾಗಿ ಖಾತೆಯಲ್ಲಿ ಎಲ್ಲಾ ಸಮಯದಲ್ಲೂ ಕನಿಷ್ಠ ಬ್ಯಾಲೆನ್ಸ್ ಇರಬೇಕು. ಚೆಕ್ ನೀಡುವ ಮೊದಲು, ಬ್ಯಾಂಕ್ ಖಾತೆಯಲ್ಲಿ ಸಾಕಷ್ಟು ಬ್ಯಾಲೆನ್ಸ್ ಇದೆಯೇ ಎಂದು ಖಚಿತಪಡಿಸಿಕೊಳ್ಳಿ. ಇಲ್ಲದಿದ್ದರೆ ಚೆಕ್ ಬೌನ್ಸ್ ಆಗುತ್ತದೆ. ಚೆಕ್ ಬೌನ್ಸ್ ಆದರೆ ದಂಡ ಪಾವತಿಸಬೇಕಾಗುತ್ತದೆ.
ಇಎಂಐ, ಸ್ವಯಂಚಾಲಿತ ವಿಮಾ ಪ್ರೀಮಿಯಂ, ಎಸ್‌ಐಪಿ ವಿಷ್ಯದಲ್ಲೂ ಎಚ್ಚರಿಕೆ ಅಗತ್ಯವಿದೆ. ರಜಾ ದಿನಗಳಲ್ಲಿ ಹಣ ಕಡಿತವಾಗಬಹುದು. ಹಾಗಾಗಿ ಖಾತೆಯಲ್ಲಿ ಸಾಕಷ್ಟು ಬ್ಯಾಲೆನ್ಸ್ ಇಡುವುದು ಅಗತ್ಯ.