ಬೂಸ್ಟರ್ ಡೋಸ್ಗಳ ಸುರಕ್ಷತೆ ಹಾಗೂ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುವ ಸಾಮರ್ಥ್ಯದ ಬಗ್ಗೆ ಕ್ಲಿನಿಕಲ್ ಪ್ರಯೋಗಗಳು ಮುಂದುವರಿಯುತ್ತಿದೆ ಎಂದು ಭಾರತ್ ಬಯೋಟೆಕ್ ಸಂಸ್ಥೆ ಹೇಳಿದೆ.
ದೇಶದ 12 ಕೇಂದ್ರಗಳಲ್ಲಿ ಕೋವ್ಯಾಕ್ಸಿನ್ ಬೂಸ್ಟರ್ ಶಾಟ್ಗಳ ಪ್ರಯೋಗಾತ್ಮಕ ಪರೀಕ್ಷೆ ನಡೆಯುತ್ತಿದೆ.
ಕೊರೊನಾ ವೈರಸ್ ಮಹಾಮಾರಿಯ ಅಟ್ಟಹಾಸ ಶುರುವಾದಾಗಿನಿಂದ ಒಂದಿಲ್ಲೊಂದು ರೂಪಾಂತರಿಗಳು ಹುಟ್ಟಿಕೊಳ್ತಾನೇ ಇವೆ. ಹೀಗಾಗಿ ತಜ್ಞರು ಈ ರೂಪಾಂತರಿಗಳ ವಿರುದ್ಧ ಹೋರಾಡಲು ಕೊರೊನಾ ಲಸಿಕೆಗಳಿಗೆ ಬೂಸ್ಟರ್ ಶಾಟ್ (ಮೂರನೇ ಡೋಸ್ ಲಸಿಕೆ)ಗಳ ಅಗತ್ಯ ಇದೆ ಎಂದು ಹೇಳಿದೆ.
ಇತ್ತೀಚಿಗೆ ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ನಡೆಸಲಾದ ಅಧ್ಯಯನದಲ್ಲಿ ಮೂರನೇ ಡೋಸ್ ಲಸಿಕೆಯು ದೇಹದಲ್ಲಿ ಆಂಟಿಬಾಡಿ ಉತ್ಪಾದನೆಯನ್ನ ಇನ್ನಷ್ಟು ಹೆಚ್ಚು ಮಾಡುತ್ತದೆ ಎಂದು ಹೇಳಿದೆ. ಅಲ್ಲದೇ ಈ ಮೂರನೇ ಡೋಸ್ ಲಸಿಕೆಯು ಕೊರೊನಾದ ಎಲ್ಲಾ ರೂಪಾಂತರಿಗಳ ವಿರುದ್ಧ ಸಮರ್ಥವಾಗಿ ಹೋರಾಡಬಲ್ಲದು.