alex Certify ಪಾಪ ಪರಿಹಾರಕ್ಕಾಗಿ ಮಕರ ಸಂಕ್ರಾಂತಿಯಂದು ಮಾಡಿ ಈ ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಪ ಪರಿಹಾರಕ್ಕಾಗಿ ಮಕರ ಸಂಕ್ರಾಂತಿಯಂದು ಮಾಡಿ ಈ ಕೆಲಸ

Makar Sankranti 2024: Follow These 5 Tips To Attain Riddance From Sins

ಭಾರತೀಯ ಜ್ಯೋತಿಷ್ಯದಲ್ಲಿ ಹನ್ನೆರಡು ರಾಶಿಚಕ್ರ ಚಿಹ್ನೆಗಳಿವೆ. ಒಂದು ರಾಶಿಯಿಂದ ಇನ್ನೊಂದಕ್ಕೆ ಸೂರ್ಯ ದೇವರ ಚಲನೆಯನ್ನು ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಈ ರೀತಿಯಾಗಿ ವರ್ಷದಲ್ಲಿ 12 ಸಂಕ್ರಾಂತಿಗಳಿವೆ, ಇವುಗಳಲ್ಲಿ ಕೆಲವನ್ನು ಹಬ್ಬಗಳಾಗಿ ಆಚರಿಸಲಾಗುತ್ತದೆ.

ಪೌರಾಣಿಕ ಗ್ರಂಥಗಳ ಪ್ರಕಾರ ಮಕರ ಸಂಕ್ರಾಂತಿಯ ದಿನದಂದು ಸ್ನಾನ, ಅಭ್ಯಂಜನ , ಹವನ, ಉಪಹಾರ, ಆಹಾರ ಮತ್ತು ದಾನ ಈ ಆರು ಕಾರ್ಯಗಳನ್ನು ಎಳ್ಳಿನಿಂದ ಮಾಡಲಾಗುತ್ತದೆ. ಈ ದಿನ ನಿತ್ಯ ಬಳಕೆಯ ವಸ್ತುಗಳಾದ ಎಳ್ಳು, ಬೆಲ್ಲ, ರಾಗಿ ಗಂಜಿ, ಖಿಚಡಿ, ತುಪ್ಪ, ಬಟ್ಟೆ, ಹೊದಿಕೆ ಇತ್ಯಾದಿಗಳನ್ನು ದಾನ ಮಾಡಲಾಗುತ್ತದೆ.

ಕೆಲವರು ಮಕರ ಸಂಕ್ರಾಂತಿಯಂದು ಉಪವಾಸ ಮಾಡುತ್ತಾರೆ. ಮಕರ ಸಂಕ್ರಾಂತಿಯ ದಿನದಂದು ಸೂರ್ಯನನ್ನು ಪೂಜಿಸಲಾಗುತ್ತದೆ. ಜನರು ನದಿ-ಕೊಳ್ಳಗಳಿಗೆ ಹೋಗಿ ಸ್ನಾನ ಮಾಡುತ್ತಾರೆ. ಕಿಚಡಿ ಮತ್ತು ಎಳ್ಳನ್ನು ದಾನ ಮಾಡುತ್ತಾರೆ.

ಯಾವ ವಸ್ತುಗಳನ್ನು ದಾನ ಮಾಡಬೇಕು?

ಮಕರ ಸಂಕ್ರಾಂತಿಯ ದಿನದಂದು ಮುಂಜಾನೆ ಎಳ್ಳಿನಿಂದ ಮಾಡಿದ ಪೇಸ್ಟ್‌ನಿಂದ ಸ್ನಾನ ಮಾಡಬೇಕು. ನಂತರ ಅಂಗಳದಲ್ಲಿ ಎಂಟು ದಳಗಳ ಕಮಲದ ಅಲ್ಪನವನ್ನು ಮಾಡಿ ಅದರಲ್ಲಿ ಸೂರ್ಯ ದೇವರನ್ನು ಆವಾಹನೆ ಮಾಡಲಾಗುತ್ತದೆ. ಸೂರ್ಯೋದಯದ ನಂತರ ಸೂರ್ಯನ ಮಂತ್ರವನ್ನು ಪಠಿಸುವಾಗ ತಾಮ್ರದ ಪಾತ್ರೆಯಿಂದ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸುತ್ತೇವೆ.

ಇದಾದ ನಂತರ ಹಸಿ ಬೇಳೆಕಾಳುಗಳು, ಅಕ್ಕಿ, ಎಳ್ಳು, ಬೆಲ್ಲ, ತುಪ್ಪ, ತರಕಾರಿಗಳು, ಹಣ್ಣುಗಳು, ಎಳ್ಳಿನ ಲಾಡು, ಇತ್ಯಾದಿಗಳನ್ನು ದಾನ ಮಾಡಲಾಗುತ್ತದೆ. ಕಂಬಳಿ, ಉಣ್ಣೆಯ ಬಟ್ಟೆಗಳು ಮತ್ತು ಹೊಸ ಪಾತ್ರೆಗಳನ್ನು ಸಹ ದಾನ ಮಾಡುವುದು ಶ್ರೇಷ್ಠ. ಸಂಕ್ರಾಂತಿಯ ದಿನ ದಾನ ಮಾಡುವುದರಿಂದ ಪಾಪ ಪರಿಹಾರವಾಗುತ್ತದೆ. ಮಕರ ಸಂಕ್ರಾಂತಿಯಂದು ಸ್ನಾನ ಮತ್ತು ದಾನಕ್ಕೆ ಹೆಚ್ಚಿನ ಮಹತ್ವವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...