ಚಳಿಗಾಲದಲ್ಲಿ ಸ್ಕಿನ್ ಡ್ರೈ ಆಗುವುದರಿಂದ ಡ್ರೈ ಸ್ಕಿನ್ ಅವರ ಮುಖದ ಅಂದ ಇನ್ನಷ್ಟು ಕೆಡುತ್ತದೆ. ಆದ ಕಾರಣ ಡ್ರೈ ಸ್ಕಿನ್ ನವರು ಚಳಿಗಾಲದಲ್ಲಿ ತಮ್ಮಸ್ಕಿನ್ ನನ್ನು ಕಾಪಾಡಿಕೊಳ್ಳಲು ಈ ಟಿಪ್ಸ್ ಫಾಲೋ ಮಾಡಿ.
ಚಳಿಗಾಲ ಬಂತೆಂದರೆ ಡ್ರೈ ಸ್ಕಿನ್ ನವರಿಗೆ ದೊಡ್ಡ ಸಮಸ್ಯೆ. ಕಾಲು ಒಡೆಯುವುದು, ಮುಖ, ಮೈ ಚರ್ಮದಲ್ಲಿ ಉರಿ ಕಾಣಿಸಿಕೊಳ್ಳುವುದು. ತುರಿಕೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಚಳಿಗಾಲದಲ್ಲಿ ಮುಖದ ಚರ್ಮವನ್ನು ಕಾಂತಿಯುತಗೊಳಿಸುವುದಕ್ಕೆ ಇಲ್ಲಿದೆ ನೋಡಿ ಟಿಪ್ಸ್.
* ಆಲಿವ್ ಆಯಿಲ್ ನೈಸರ್ಗಿಕವಾದ ಕ್ಲೇನ್ಸರ್ ರೀತಿ ಕೆಲಸ ಮಾಡುತ್ತದೆ. ಡ್ರೈ ಸ್ಕಿನ್ ಗೆ ಇದು ಒಳ್ಳೆಯ ಮಾಯಿಶ್ಚರೈಸರ್ ಕೂಡ ಹೌದು. ಸ್ವಲ್ಪ ಆಲಿವ್ ಆಯಿಲ್ ಅನ್ನು ತೆಗೆದುಕೊಂಡು ಮುಖಕ್ಕೆ ಚೆನ್ನಾಗಿ ಮಸಾಜ್ ಮಾಡಿ. ನಂತರ ಬಿಸಿನೀರಲ್ಲಿಒಂದು ಟವೆಲ್ ಅನ್ನು ಅದ್ದಿ ಈ ಬಟ್ಟೆಯ ಶಾಖವನ್ನು ಮುಖಕ್ಕೆ ಕೊಟ್ಟುಕೊಳ್ಳಿ. ಬಟ್ಟೆ ತಣ್ಣಗಾಗುವವರೆಗೂ ಮುಖದ ಮೇಲೆಯೇ ಇಟ್ಟುಕೊಳ್ಳಿ.
* ಬೆಣ್ಣೆಹಣ್ಣು ಕೂಡ ಡ್ರೈ ಸ್ಕಿನ್ ಗೆ ಹೇಳಿಮಾಡಿಸಿದ ಒಂದು ಮಾಯಿಶ್ಚರೈಸರ್. ಅರ್ಧ ಬೆಣ್ಣೆಹಣ್ಣಿನ ಮಿಶ್ರಣ ತೆಗೆದುಕೊಳ್ಳಿ, ಅದಕ್ಕೆ 1 ಟೀ ಸ್ಪೂನ್ ಆಲಿವ್ ಆಯಿಲ್ ಹಾಕಿ 1 ಟೇಬಲ್ ಸ್ಪೂನ್ ಜೇನುತುಪ್ಪ ಹಾಕಿ. ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. 20 ನಿಮಿಷ ಬಿಟ್ಟು ಮುಖ ತೊಳೆಯಿರಿ. ವಾರದಲ್ಲಿ ಎರಡು ಬಾರಿ ಮಾಡಿ.
* ಸ್ನಾನ ಮಾಡುವ ನೀರಿಗೆ 1 ಕಪ್ ಓಟ್ ಮೀಲ್ ಹಾಕಿ. 10 ನಿಮಿಷ ಬಿಟ್ಟು ಈ ನೀರಿನಿಂದ ಸ್ನಾನ ಮಾಡಿದರೆ ಮೈ ಕೈಯಲ್ಲಿ ಉಂಟಾಗುವ ತುರಿಕೆ ಹಾಗೂ ಉರಿಯನ್ನು ಇದು ಶಮನ ಮಾಡುತ್ತದೆ.
* ಹಾಲು ಕೂಡ ಮುಖದ ಕಾಂತಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಲಿನಲ್ಲಿ ಲ್ಯಾಕ್ಟಿಕ್ ಆಸ್ಯಿಡ್ ಇರುತ್ತದೆ. ಚಳಿಗಾಲದಲ್ಲಿ ಒಂದು ಹತ್ತಿಯ ಉಂಡೆ ತೆಗೆದುಕೊಂಡು ಹಾಲಿಗೆ ಅದ್ದಿ ಆಗಾಗ ಮುಖಕ್ಕೆ ಹಚ್ಚುತ್ತಾ ಇರಿ ಇದರಿಂದ ಸ್ಕಿನ್ ಡ್ರೈ ಕಡಿಮೆಯಾಗಿ ಕಾಂತಿಯುತವಾಗುವುದು.