ಅನೇಕರು ಬೆಳಿಗ್ಗೆ ಎದ್ದ ತಕ್ಷಣ ಟೀ ಕುಡಿಯಲು ಇಷ್ಟಪಡ್ತಾರೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಟೀ ಸೇವನೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾಗಿ ಬೆಳಿಗ್ಗೆ ಗ್ರೀನ್ ಟೀ ಸೇವನೆ ಮಾಡುವುದು ಉತ್ತಮ. ಗ್ರೀನ್ ಟೀ ರುಚಿಯಾಗಿರುವುದಿಲ್ಲ ಎಂಬ ಕಾರಣಕ್ಕೆ ಅನೇಕರು ಗ್ರೀನ್ ಟೀ ಕುಡಿಯುವುದಿಲ್ಲ.
ಗ್ರೀನ್ ಟೀ ಆರೋಗ್ಯಕ್ಕೆ ಬಹಳ ಒಳ್ಳೆಯದು. ಗ್ರೀನ್ ಟೀ ರುಚಿ ಹೆಚ್ಚಾಗಬೇಕೆಂದ್ರೆ ಗ್ರೀನ್ ಟೀಯನ್ನು ಬಿಸಿ ನೀರಿನಲ್ಲಿ ಬಹಳ ಸಮಯ ನೆನೆಸಿಡಬೇಡಿ. ಪಾತ್ರೆಗೆ ನೀರು ಹಾಕಿ ಕುದಿಸಿ. ಒಂದು ಲೋಟಕ್ಕೆ ಅರ್ಧ ಚಮಚ ಗ್ರೀನ್ ಟೀಯನ್ನು ಹಾಕಿ. ಅದ್ರ ಮೇಲೆ ಬಿಸಿ ನೀರನ್ನು ಹಾಕಿ. ಎರಡು ನಿಮಿಷ ಬಿಟ್ಟು ಜರಡಿ ಹಿಡಿದು ಸೇವನೆ ಮಾಡಿ.
ರುಚಿ ಹೆಚ್ಚಾಗಬೇಕೆಂದ್ರೆ ಗ್ರೀನ್ ಟೀಗೆ ನಿಂಬೆ ರಸ ಮತ್ತು ಜೇನು ತುಪ್ಪವನ್ನು ಹಾಕಿ. ಇದು ಪೌಷ್ಠಿಕಾಂಶವನ್ನು ಹೆಚ್ಚಿಸುತ್ತದೆ. ಶುಂಠಿ ಹಾಗೂ ಕಾಳು ಮೆಣಸನ್ನು ಕುದಿಸಿ ಇದಕ್ಕೆ ಬೆರೆಸಿ ಸೇವನೆ ಮಾಡಬಹುದು. ಏಲಕ್ಕಿ ಇಷ್ಟಪಡುವವರು ಏಲಕ್ಕಿ ನೀರನ್ನು ಕೂಡ ಇದಕ್ಕೆ ಬೆರೆಸಬಹುದು. ಇದು ರುಚಿ ಮತ್ತು ಗುಣಮಟ್ಟವನ್ನು ಹೆಚ್ಚಿಸುತ್ತದೆ.