alex Certify ಮುಖದ ಮೇಲೆ ಮೂಡುವ ನೆರಿಗೆಗಳನ್ನು ನಿವಾರಿಸಲು ಮಾಡಿ ಈ ವ್ಯಾಯಾಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಖದ ಮೇಲೆ ಮೂಡುವ ನೆರಿಗೆಗಳನ್ನು ನಿವಾರಿಸಲು ಮಾಡಿ ಈ ವ್ಯಾಯಾಮ

ವಯಸ್ಸು ಹೆಚ್ಚಿದಂತೆ ಚರ್ಮದಲ್ಲಿ ನೆರಿಗೆಗಳು ಮೂಡಲು ಆರಂಭವಾಗುತ್ತೆ. ತುಟಿಯ ಸುತ್ತಮುತ್ತ ಆಗುವ ಇಂತಹ ರಿಂಕಲ್ಸ್ ಗೆ ಸ್ಮೈಲ್ ಲೈನ್ಸ್ ಎನ್ನುತ್ತಾರೆ. ಇದು ವಯೋಸಹಜ ಲಕ್ಷಣವಾದರೂ ಕೆಲವರು ಮುಖದಲ್ಲಿ ನೆರಿಗೆಗಳು ಮೂಡುವುದನ್ನು ಇಷ್ಟಪಡುವುದಿಲ್ಲ. ಹಾಗಾಗಿ ಅದಕ್ಕೆ ಬೇಕಾಗುವಂತ ಪ್ರಯತ್ನಗಳನ್ನು ಮಾಡುತ್ತಾರೆ. ಮುಖದಲ್ಲಿ ಸ್ಮೈಲ್ ಲೈನ್ಸ್ ಕಡಿಮೆ ಮಾಡಲು ಪೌಷ್ಠಿಕ ಆಹಾರಗಳನ್ನು ಸೇವಿಸಬೇಕು. ಕೆಲವು ಮುಖದ ವ್ಯಾಯಾಮಗಳನ್ನು ಮಾಡಬೇಕು.

ನಿಮ್ಮ ಕಣ್ಣನ್ನು ಮುಚ್ಚಿಕೊಂಡು ಹೆಬ್ಬೆರಳನ್ನು ಕಣ್ಣಿನ ತುದಿಯಲ್ಲಿಡಿ. ನಿಮ್ಮ ಬೆರಳುಗಳು ಹಣೆಯ ಮೇಲಿರಲಿ. ಈ ವ್ಯಾಯಾಮವಾದ ನಂತರ ಹೆಬ್ಬೆರಳನ್ನು ಹಣೆಗೆ ತರಲು ಪ್ರಯತ್ನಿಸಿ. 5 ಸೆಕೆಂಡ್ ನಿಮ್ಮ ಕೈ ಹಾಗೇ ಇರಲಿ. ದಿನಕ್ಕೆ 10 ಬಾರಿ ಈ ವ್ಯಾಯಾಮವನ್ನು ಮಾಡಿ ಇದರಿಂದ ಕಣ್ಣಿನ ಹತ್ತಿರದ ಸುಕ್ಕುಗಳು ಹೋಗುತ್ತವೆ.

ನಿಮ್ಮ ತೋರು ಬೆರಳಿನ ಸಹಾಯದಿಂದ ನಿಮ್ಮ ಬಾಯಿಯ ಮೂಲೆಯನ್ನು ಬದಿಗೆ ತಳ್ಳಲು ಅಥವಾ ಹಿಗ್ಗಿಸಿ  ಪ್ರಯತ್ನಿಸಿ. ಸ್ವಲ್ಪ ಸಮಯ ಅದೇ ಸ್ಥಿತಿಯಲ್ಲಿರಿ. ತುಂಬ ಜೋರಾಗಿ ಕೂಡ ಹಿಗ್ಗಿಸಬೇಡಿ. ಬಾಯಿಯ ಎರಡು ಮೂಲೆಗೂ ಹೀಗೆ ಮಾಡಿ. ದಿನಕ್ಕೆ 25 ಬಾರಿ ಈ ವ್ಯಾಯಾಮ ಮಾಡಿ. ಕೈ ಸಹಾಯ ತೆಗೆದುಕೊಳ್ಳದೇ ಬಾಯಿಯ ಮೂಲೆಯನ್ನು ಹಿಗ್ಗಿಸಲು ಪ್ರಯತ್ನಿಸಿ. ಈ ವ್ಯಾಯಾಮ ನಿಮ್ಮ ಚರ್ಮ ಸಡಿಲವಾಗುವುದನ್ನು ತಪ್ಪಿಸುತ್ತದೆ ಮತ್ತು ಇದರಿಂದ ಚರ್ಮದ ಮೇಲ್ಪದರ ಕೂಡ ಉತ್ತಮವಾಗುತ್ತದೆ.

ನಿಮ್ಮ ಬೆರಳುಗಳನ್ನು ನಿಮ್ಮ ಸ್ಮೈಲ್ ಲೈನ್ಸ್ ಮೇಲಿಟ್ಟು ಎಷ್ಟು ಸಾಧ್ಯವೋ ಅಷ್ಟು ದೊಡ್ಡದಾಗಿ ನಗಲು ಪ್ರಯತ್ನಿಸಿ. 5 ಸೆಕೆಂಡ್ ಗಳ ಕಾಲ ಇದೇ ಸ್ಥಿತಿಯಲ್ಲಿರಿ. ದಿನಕ್ಕೆ 30 ಬಾರಿ ಹೀಗೆ ಮಾಡಿ. ಇದರಿಂದ ಸ್ಮೈಲ್ ಲೈನ್ಸ್ ದೂರವಾಗುತ್ತದೆ ಮತ್ತು ಇದರಿಂದ ಕೆನ್ನೆಯ ಸ್ನಾಯುಗಳು ಗಟ್ಟಿಯಾಗುತ್ತವೆ.

ಸುಕ್ಕುಗಳಿಂದ ರಕ್ಷಣೆ ಪಡೆಯಲು ದಿನಕ್ಕೆ 2 ಲೀಟರ್ ನೀರು ಕುಡಿಯಿರಿ. ಓಮೆಗಾ 3 ಮತ್ತು ಫ್ಯಾಟಿ ಎಸಿಡ್ ಗಳನ್ನು ಸೇವಿಸಿ. ಎಷ್ಟು ಸಾಧ್ಯವೋ ಅಷ್ಟು ಬಿಸಿಲಿನಲ್ಲಿ ಹೋಗಬೇಡಿ. ಹೊರಗಡೆ ಹೋಗಬೇಕಾದರೆ ಸನ್ ಸ್ಕ್ರೀನ್ ಅನ್ನು ಹಚ್ಚಿಕೊಳ್ಳಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...