ಜೀವನದಲ್ಲಿ ತುಂಬಾ ಚಿಂತೆ, ಕೆಲಸದ ಒತ್ತಡವಿದ್ದಾಗ ನಿದ್ರೆ ಸರಿಯಾಗಿ ಬರುವುದಿಲ್ಲ. ಅಂಥವರು ರಾತ್ರಿ ತುಂಬಾ ಕಷ್ಟ ಪಟ್ಟು ಮಲಗುತ್ತಾರೆ. ಇಲ್ಲವಾದರೆ ಬೆಳಿಗ್ಗಿನ ಕೆಲಸಗಳನ್ನು ಮಾಡಲು ಆಗುವುದಿಲ್ಲ. ರಾತ್ರಿ ಚೆನ್ನಾಗಿ ನಿದ್ರೆ ಬರುವಂತೆ ಮಾಡಲು ರಾತ್ರಿ ಮಲಗುವ ಮುನ್ನ ತಪ್ಪದೇ ಈ ಕೆಲಸ ಮಾಡಿ.
*ನೀವು ರಾತ್ರಿ ಮಲಗುವ ಮುನ್ನ ಪಾದಗಳಿಗೆ ಹಾಗೂ ಅಂಗೈಗಳಿಗೆ ಸ್ವಲ್ಪ ತುಪ್ಪವನ್ನು ಹಚ್ಚಿ ಮಸಾಜ್ ಮಾಡಿ. ಇದರಿಂದ ಸ್ವಲ್ಪ ಹೊತ್ತಿನಲ್ಲೇ ನಿಮಗೆ ಸುಖಕರವಾದ ನಿದ್ದೆ ಬರುತ್ತದೆ. ಹಾಗೇ ಪಾದಗಳಲ್ಲಿ ಬಿರುಕು ಬಿಟ್ಟಿದ್ದರೆ ಅದು ನಿವಾರಣೆಯಾಗುತ್ತದೆ.