ಎಲ್ಲರ ಅಡುಗೆ ಮನೆಯಲ್ಲಿ ಲವಂಗದ ಎಲೆ ಇದ್ದೇ ಇರುತ್ತದೆ. ಸಾಮಾನ್ಯವಾಗಿ ಲವಂಗದ ಎಲೆಯನ್ನು ಮಸಾಲೆ ಪದಾರ್ಥವಾಗಿ ಬಳಸಲಾಗುತ್ತದೆ. ಲವಂಗದ ಎಲೆಯನ್ನು ಆಯುರ್ವೇದ ಔಷಧಿಗೂ ಬಳಸಲಾಗುತ್ತದೆ. ಲವಂಗದ ಎಲೆಗಳು ಆಹಾರದ ಪರಿಮಳವನ್ನು ಹೆಚ್ಚಿಸುತ್ತದೆ.
ಲವಂಗದ ಎಲೆ ಆರೋಗ್ಯಕ್ಕೂ ಬಹಳ ಒಳ್ಳೆಯದು. ಪ್ರಾಚೀನ ಕಾಲದಿಂದಲೂ ಅದ್ರ ಬಳಕೆ ಮಾಡಲಾಗ್ತಿದೆ. ಕರುಳು ಹಾಗೂ ಮೂತ್ರಪಿಂಡದ ಚಿಕಿತ್ಸೆಗೆ ಇದನ್ನು ಬಳಸಲಾಗುತ್ತಿತ್ತು. ಜೇನುಹುಳ ಕಚ್ಚಿದ್ರೆ ಅದ್ರ ಚಿಕಿತ್ಸೆಗೂ ಲವಂಗದ ಎಲೆಯನ್ನು ಬಳಸಲಾಗ್ತಾಯಿತ್ತು.
ಲವಂಗದ ಎಲೆಯಿಂದ ಇನ್ನಷ್ಟು ಪ್ರಯೋಜನಗಳಿವೆ. ಲವಂಗದ ಎಲೆ ಒತ್ತಡ ಕಡಿಮೆ ಮಾಡಲು ಸಹಕಾರಿಯಂತೆ. ಸಂಶೋಧನೆಯೊಂದು ಇದನ್ನು ಸ್ಪಷ್ಟಪಡಿಸಿದೆ. ಲವಂಗದಿಂದ ಬರುವ ಸುವಾಸನೆ ಮನಸ್ಸಿಗೆ ಮುದ ನೀಡಿ ಒತ್ತಡವನ್ನು ಕಡಿಮೆ ಮಾಡುತ್ತದೆಯಂತೆ.
ಒಂದು ಪಾತ್ರೆಗೆ ಲವಂಗದ ಎಲೆಗಳನ್ನು ಹಾಕಿ ಸುಡಬೇಕು. ಅದನ್ನು ಕೋಣೆಯಲ್ಲಿಟ್ಟು ಕೋಣೆ ಬಾಗಿಲು ಹಾಕಿ. 15 ನಿಮಿಷಗಳ ನಂತ್ರ ಕೋಣೆ ಬಾಗಿಲು ತೆಗೆದ್ರೆ ಮನಸ್ಸಿಗೆ ಹಿತವೆನಿಸುವ ವಾಸನೆ ಕೋಣೆಯನ್ನು ತುಂಬಿಕೊಂಡಿರುತ್ತದೆ. ಲವಂಗದ ವಾಸನೆ ಮಿದುಳಿನ ವೇಗವನ್ನು ಹೆಚ್ಚಿಸುತ್ತದೆ.