ಹಿಂದೂಧರ್ಮದಲ್ಲಿ ತುಳಸಿಗೆ ಹೆಚ್ಚಿನ ಮಹತ್ವವಿದೆ. ತುಳಸಿಯನ್ನು ಲಕ್ಷ್ಮೀದೇವಿಯ ರೂಪದಲ್ಲಿ ಪೂಜಿಸಲಾಗುತ್ತದೆ. ಹಾಗಾಗಿ ಹಿಂದೂಗಳ ಮನೆಯ ಮುಂದೆ ತುಳಸಿ ಗಿಡವನ್ನು ನೆಟ್ಟು ಪೂಜೆ ಮಾಡುತ್ತಾರೆ. ಆದರೆ ಈ ಪೂಜೆಯ ಸಮಯದಲ್ಲಿ ತುಳಸಿಗೆ ಅಪ್ಪಿತಪ್ಪಿಯೂ ನೀರಿನ ಬದಲು ಈ ವಸ್ತುಗಳನ್ನು ಅರ್ಪಿಸಬೇಡಿ.
ತುಳಸಿ ಗಿಡಕ್ಕೆ ಹೆಚ್ಚಾಗಿ ನೀರನ್ನು ಅರ್ಪಿಸುತ್ತಾರೆ. ಆದರೆ ನೀರಿನ ಬದಲು ಹಾಲನ್ನು ತುಳಸಿ ಗಿಡಕ್ಕೆ ಅರ್ಪಿಸಬೇಡಿ. ಇದರಿಂದ ತುಳಸಿ ಗಿಡ ಒಣಗುತ್ತದೆಯಂತೆ. ಇದರಿಂದ ಲಕ್ಷ್ಮಿದೇವಿ ಕೋಪಗೊಳ್ಳುತ್ತಾಳಂತೆ.
ಹಾಗೇ ತುಳಸಿ ಗಿಡಕ್ಕೆ ಬಿಲ್ವಪತ್ರೆ, ಧಾತುರದಂತಹ ಕಾಡು ಹೂಗಳನ್ನು ಅರ್ಪಿಸಬೇಡಿ. ಇದು ದೇವಿಯ ಕೋಪಕ್ಕೆ ಕಾರಣವಾಗಬಹುದಂತೆ.
ತುಳಸಿ ಗಿಡಕ್ಕೆ ಎಳ್ಳಿನ ಎಣ್ಣೆ ಸೇರಿದಂತೆ ಯಾವುದೇ ಎಣ್ಣೆಯನ್ನು ಎಂದಿಗೂ ಅರ್ಪಿಸಬೇಡಿ. ಇದು ತುಳಸಿ ಗಿಡಕ್ಕೆ ಹಾನಿ ಮಾಡುತ್ತದೆಯಂತೆ. ಇದರಿಂದ ಮನೆಗೆ ಕೆಟ್ಟದಾಗುತ್ತದೆಯಂತೆ.
ಅಲ್ಲದೇ ತುಳಸಿ ಗಿಡಕ್ಕೆ ಕಬ್ಬಿನ ರಸವನ್ನು ಅರ್ಪಿಸಬೇಡಿ. ಕಬ್ಬಿನ ರಸ ಶಿವನಿಗೆ ಪ್ರಿಯವಾದುದು. ಹಾಗಾಗಿ ಶಿವನಿಗ ಅರ್ಪಿಸಲಾಗುತ್ತದೆ. ಇದನ್ನು ತುಳಸಿಗೆ ಅರ್ಪಿಸಿದರೆ ಆಕೆ ಕೋಪಗೊಳ್ಳುತ್ತಾಳಂತೆ.
ಹಾಗೇ ತುಳಸಿಗೆ ಎಂದಿಗೂ ಕಾಜಲ್ ನಂತಹ ಕಪ್ಪು ವಸ್ತುಗಳನ್ನು ಅರ್ಪಿಸಬೇಡಿ, ಕಪ್ಪು ಎನ್ನುವುದು ಜೇಷ್ಠ ಲಕ್ಷ್ಮಿಯ ಸಂಕೇತವಂತೆ. ಇದರಿಂದ ಮನೆಯಲ್ಲಿ ಆರ್ಥಿಕ ಸಮಸ್ಯೆ ಕಾಡುತ್ತದೆಯಂತೆ.
ಹಾಗಾಗಿ ಲಕ್ಷ್ಮಿದೇವಿಯ ಅನುಗ್ರಹ ನಿಮ್ಮ ಹಾಗೂ ನಿಮ್ಮ ಮನೆಗೆ ಸಿಗಬೇಕೆಂದರೆ ತುಳಸಿ ಗಿಡಕ್ಕೆ ಶುದ್ಧವಾದ ನೀರನ್ನು ಬಿಟ್ಟು ಬೇರೆ ಏನನ್ನೂ ಅರ್ಪಿಸಬೇಡಿ.