![If you have the habit of consuming these ingredients after eating pan, beware | ಪಾನ್ ತಿಂದ ಬಳಿಕ ಈ ಪದಾರ್ಥಗಳನ್ನು ಸೇವಿಸುವ ಅಭ್ಯಾಸ ನಿಮಗೂ ಇದ್ದರೆ ಹುಷಾರ್! Health News in Kannada](https://kannada.cdn.zeenews.com/kannada/sites/default/files/styles/zm_700x400/public/2023/01/16/278557-paan.jpg?itok=fBIrflmt)
ವೀಳ್ಯದಲೆ (ಪಾನ್)ಆರೋಗ್ಯಕ್ಕೆ ತುಂಬಾ ಉತ್ತಮ. ಇದರಲ್ಲಿ ಔಷಧೀಯ ಗುಣವಿದೆ. ಇದನ್ನು ಆಯುರ್ವೇದದ ಚಿಕಿತ್ಸೆಯಲ್ಲಿ ಬಳಸುತ್ತಾರೆ. ಆದರೆ ವೀಳ್ಯದೆಲೆಯನ್ನು ಸೇವಿಸಿದ ಬಳಿಕ ಈ ಇವುಗಳನ್ನು ಸೇವಿಸಬಾರದಂತೆ. ಇದರಿಂದ ಆರೋಗ್ಯ ಹಾಳಾಗುತ್ತದೆಯಂತೆ.
ಪಾನ್ ತಿಂದ ಬಳಿಕ ಹಾಲನ್ನು ಕುಡಿಯಬೇಡಿ. ಇದರಿಂದ ಜೀರ್ಣಕ್ರಿಯೆಯಲ್ಲಿ ತೊಂದರೆಯಾಗುತ್ತದೆಯಂತೆ. ಇದರಿಂದ ಹೊಟ್ಟೆನೋವು, ಹೊಟ್ಟೆ ಸೆಳೆತದ ಸಮಸ್ಯೆ ಕಾಡುತ್ತದೆಯಂತೆ.
ಹಾಗೇ ಪಾನ್ ತಿಂದ ನಂತರ ಔಷಧಿಗಳನ್ನು ಸೇವಿಸಬಾರದಂತೆ. ವೀಳ್ಯದೆಲೆಯಲ್ಲಿರುವ ಅಂಶ ಔಷಧಿಗಳ ಜೊತೆ ಪ್ರತಿಕ್ರಿಯೆಗೊಳ್ಳುತ್ತದೆ. ಇದರಿಂದ ತಲೆನೋವು ಮತ್ತು ಹೊಟ್ಟೆನೋವಿನಂತಹ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಡುತ್ತದೆಯಂತೆ.
ಪಾನ್ ತಿಂದ ನಂತರ ಜ್ಯೂಸ್ ಕುಡಿಯಬೇಡಿ. ಇದು ಬಾಯಿಯ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆಯಂತೆ. ಇದರಿಂದ ನಿಮಗೆ ಆಹಾರ ಸೇವಿಸಲು ಕಷ್ಟವಾಗಬಹುದು. ಇದರಿಂದ ಹೊಟ್ಟೆಯಲ್ಲಿ ಕೂಡ ಸಮಸ್ಯೆ ಕಂಡುಬರಬಹುದು.
ಪಾನ್ ತಿಂದ ನಂತರ ಯಾವುದೇ ಮಸಾಲೆ ಪದಾರ್ಥಗಳನ್ನು ಸೇವಿಸಬೇಡಿ. ಇದರಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಕಾಡುತ್ತದೆಯಂತೆ. ಗ್ಯಾಸ್, ಆ್ಯಸಿಡಿಟಿ, ಮಲಬದ್ಧತೆ ಸಮಸ್ಯೆಗೆ ನೀವು ಒಳಗಾಗಬಹುದು.