alex Certify ಮುಂಜಾನೆ ವೇಳೆ ಸೇವಿಸದಿರಿ ಹುಳಿ ʼಪದಾರ್ಥʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಂಜಾನೆ ವೇಳೆ ಸೇವಿಸದಿರಿ ಹುಳಿ ʼಪದಾರ್ಥʼ

ಕೆಲವರು ತಿನ್ನಲು ಟೈಮ್ ನೋಡುವುದಿಲ್ಲ. ಯಾವಾಗ ಮನಸ್ಸು ಬರುತ್ತದೋ ಆಗ ತಿನ್ನಲು ಮುಂದಾಗುತ್ತಾರೆ. ಕೆಲವೊಮ್ಮೆ ಏನು ತಿನ್ನುತ್ತಿದ್ದೇವೆ ಎಂಬುದರತ್ತಲು ಗಮನ ಹರಿಸುವುದಿಲ್ಲ. ಈ ಅಭ್ಯಾಸದಿಂದ ಅನೇಕ ಸಮಸ್ಯೆಗಳು ಎದುರಾಗುತ್ತವೆ.

ಬಹಳಷ್ಟು ಜನರು ನಿದ್ರೆಯಿಂದ ಎದ್ದೊಡನೆಯೇ ಕಾಫಿ ಅಥವಾ ಟೀ ಸೇವಿಸುತ್ತಾರೆ. ಹಾಳು ಹೊಟ್ಟೆಯಲ್ಲಿ ಇದನ್ನು ಸೇವಿಸುವುದು ಒಳ್ಳೆಯದಲ್ಲ. ಕಾಫಿ ಟೀ ಕುಡಿಯುವ ಮುನ್ನ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದರ ಮೂಲಕ ದಿನಚರಿ ಆರಂಭಿಸಬೇಕು. ಇಲ್ಲದಿದ್ದರೆ ಹಾರ್ಮೋನ್ ಅಸಮತೋಲನ ಉಂಟಾಗುತ್ತದೆ.

ತಡವಾಗಿ ಎದ್ದಾಗ ಅಥವಾ ಖಾಲಿ ಹೊಟ್ಟೆಯಲ್ಲಿ ಇದ್ದಾಗ ಸೋಡಾ, ತಂಪು ಪಾನೀಯಗಳನ್ನು ಸೇವಿಸಲೇಬಾರದು. ಈ ರೀತಿ ಮಾಡಿದರೆ ಜೀರ್ಣಾಂಗಗಳಲ್ಲಿ ಹಾನಿ ಉಂಟು ಮಾಡುವ ಆಮ್ಲಗಳು ಬಿಡುಗಡೆಯಾಗುತ್ತದೆ. ಅಲ್ಲದೆ ಅನಾರೋಗ್ಯವು ಕಾಡುತ್ತದೆ. ಜೊತೆಗೆ ವಾಂತಿ ಕೂಡ ಎದುರಾಗಬಹುದು. ಹಾಗಾಗಿ ಇವೆಲ್ಲವನ್ನು ಸೇವಿಸುವುದಕ್ಕಿಂತ ಮೊದಲು ನೀರನ್ನು ಕುಡಿಯುವುದು ಒಳಿತು.

ತೀಕ್ಷ್ಣವಾದ ಮಸಾಲೆಗಳನ್ನು ಹೊಂದಿರುವ ಹುಳಿಯಾದ ಗ್ರೇವಿ ಪದಾರ್ಥಗಳನ್ನು ಮುಂಜಾನೆ ಸಮಯದಲ್ಲಿ ತಿನ್ನಬಾರದು. ಇವುಗಳಿಗೆ ಬಳಸಿರುವ ಎಣ್ಣೆಯಿಂದ ಅನಾರೋಗ್ಯ ಉಂಟಾಗುತ್ತದೆ. ಇದೇ ರೀತಿ ಹೆಚ್ಚು ಕಾಲ ಇದ್ದಲ್ಲಿ ಅಲ್ಸರ್ ಎದುರಾಗುವ ಸಂಭವವಿರುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...