alex Certify ಚೆಕ್​​ ವ್ಯವಹಾರಕ್ಕೂ ಮುನ್ನ ನೆನಪಿನಲ್ಲಿರಲಿ ಬ್ಯಾಂಕಿಂಗ್​​ನ ಈ ಹೊಸ ನಿಯಮ: ಇಲ್ಲವಾದಲ್ಲಿ ಪಾವತಿಸಬೇಕು ದಂಡ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚೆಕ್​​ ವ್ಯವಹಾರಕ್ಕೂ ಮುನ್ನ ನೆನಪಿನಲ್ಲಿರಲಿ ಬ್ಯಾಂಕಿಂಗ್​​ನ ಈ ಹೊಸ ನಿಯಮ: ಇಲ್ಲವಾದಲ್ಲಿ ಪಾವತಿಸಬೇಕು ದಂಡ..!

ನೀವು ಚೆಕ್​ ಮೂಲಕ ಬ್ಯಾಂಕಿಂಗ್​ ವ್ಯವಹಾರ ನಡೆಸುವವರಾಗಿದ್ದರೆ ಮೊದಲಿಗಿಂತ ಹೆಚ್ಚು ಜಾಗರೂಕರಾಗಿ ಇರಬೇಕು. ಆರ್​ಬಿಐ ಬ್ಯಾಂಕಿಂಗ್​ ನಿಯಮಗಳಲ್ಲಿ ಕೆಲ ಮಹತ್ವದ ಬದಲಾವಣೆಗಳನ್ನು ತಂದಿದೆ. ಆರ್​ಬಿಐ ಇನ್ಮುಂದೆ 24 ಗಂಟೆ ಬಲ್ಕ್​ ಕ್ಲಿಯರಿಂಗ್​​ ಸೌಲಭ್ಯವನ್ನು ನೀಡಲು ನಿರ್ಧರಿಸಿದೆ. ಇದರ ನೇರ ಪರಿಣಾಮ ನಿಮ್ಮ ಚೆಕ್​ ಪಾವತಿ ಮೇಲೆ ಬೀರುತ್ತದೆ. ಅಂದರೆ ಇನ್ಮುಂದೆ ಚೆಕ್​​ ಕ್ಲಿಯರ್​ ಆಗಲು 2 ದಿನಗಳ ಸಮಯ ಬೇಕಾಗೋದಿಲ್ಲ. ಚೆಕ್​​​ನ್ನು ಬ್ಯಾಂಕಿಗೆ ನೀಡುತ್ತಿದ್ದಂತೆಯೇ ಅದರಲ್ಲಿರುವ ಹಣವು ಕ್ಲಿಯರ್​ ಆಗಲಿದೆ. ಹೀಗಾಗಿ ಚೆಕ್​ ನೀಡುವ ಮುನ್ನ ನೀವು ನಿಮ್ಮ ಖಾತೆಯಲ್ಲಿ ಅಷ್ಟೊಂದು ಹಣ ಇದೆಯೇ ಅನ್ನೋದನ್ನ ಮೊದಲೇ ಖಾತರಿ ಪಡಿಸಿಕೊಳ್ಳುವುದು ಒಳ್ಳೆಯದು.

ಪ್ರಸ್ತುತ ಚೆಕ್​ NACH ವಾರದ 7 ದಿನವೂ ಸೇವೆ ನೀಡಲಿದೆ. ಹೀಗಾಗಿ ನೀವು ಚೆಕ್​ ಮೂಲಕ ಪಾವತಿ ಮಾಡುವ ಮುನ್ನ ನಿಮ್ಮ ಖಾತೆಯಲ್ಲಿರುವ ಮೊತ್ತದ ಬಗ್ಗೆ ಜಾಗರೂಕರಾಗಿ ಇರಬೇಕು. ಪ್ರಸ್ತುತ ನಾನ್​ ವರ್ಕಿಂಗ್​​ ದಿನವೂ ಅಂದರೆ ಸಾಪ್ತಾಹಿಕ ರಜೆ ಹಾಗೂ ಸರ್ಕಾರಿ ರಜಾ ದಿನವೂ NACH ಕಾರ್ಯ ನಿರ್ವಹಿಸಲಿದೆ. ಆದ್ದರಿಂದ ನಿಮ್ಮ ಖಾತೆಯಲ್ಲಿ ಹಣ ಇಲ್ಲದೇ ಹೋದಲ್ಲಿ ಚೆಕ್​ ಬೌನ್ಸ್​ ಆಗಲಿದೆ. ಮೊದಲೆಲ್ಲ ಚೆಕ್​ಗೆ ಸಹಿ ಹಾಕಿದ ಬಳಿಕವೂ ಖಾತೆಯಲ್ಲಿ ಹಣ ಹೊಂದಿಸಲು 2 ದಿನಗಳ ಸಮಯಾವಕಾಶ ಇರುತ್ತಿತ್ತು. ಆದರೆ ಈಗ ಚೆಕ್​ ಬೌನ್ಸ್ ಭಯ ಮೊದಲಿಗಿಂತ ಹೆಚ್ಚು ಇರಲಿದೆ. 

ಏನಿದು NACH..?

ನ್ಯಾಷನಲ್​​ ಪೇಮೇಂಟ್ಸ್​ ಕಾರ್ಪೋರೇಷನ್​ ಆಫ್​ ಇಂಡಿಯಾ ಮೂಲಕ ಬಲ್ಕ್​ ಪೇಮೆಂಟ್​ ಮಾಡಲಾಗುತ್ತದೆ. ಇದು ಏಕಕಾಲದಲ್ಲಿ ಅನೇಕ ಕ್ರೆಡಿಟ್​ ಟ್ರಾನ್ಸ್​ಫರ್​​​ ಸೌಕರ್ಯ ನೀಡುತ್ತದೆ. ಇದನ್ನು ಹೊರತುಪಡಿಸಿ, ಸಂಬಳ, ಪಿಂಚಣಿ, ಸಾಲ, ಡಿವಿಡೆಂಟ್​ ಸೇರಿದಂತೆ ಅನೇಕ ಪಾವತಿ ಕಾರ್ಯಗಳು ಇದರ ಅಡಿಯಲ್ಲೇ ನಡೆಯುತ್ತದೆ. ಇದು ಎಲೆಕ್ಟ್ರಿಸಿಟಿ, ಗ್ಯಾಸ್​, ಟೆಲಿಫೋನ್​, ನೀರು, ಸಾಲದ ಬಡ್ಡಿ ಪಾವತಿ, ಬಾಡಿಗೆ, ವಿಮೆ ಸೇರಿದಂತೆ ಸಾಕಷ್ಟು ಪಾವತಿ ಕಾರ್ಯಗಳನ್ನು ಮಾಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...