
ಹಲಸಿನ ಹಣ್ಣು ಎಷ್ಟು ರುಚಿಕರವಾಗಿರುತ್ತದೆಯೋ ಅದೇ ರೀತಿ ಹಲಸಿನ ಕಾಯಿಯ ಮೇಲೋಗರಗಳು ಕೂಡ ಬಾಯಲ್ಲಿ ನೀರು ತರಿಸುತ್ತವೆ. ವಿಟಮಿನ್ ಎ, ಸಿ, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂನಂತಹ ಪೋಷಕಾಂಶಗಳು ಹಲಸಿನ ಹಣ್ಣಿನಲ್ಲಿವೆ. ಆದರೆ ಹಲಸಿನ ಹಣ್ಣು ತಿಂದ ನಂತರ ಕೆಲವೊಂದು ವಸ್ತುಗಳ ಸೇವನೆ ನಿಷಿದ್ಧ. ಅವುಗಳನ್ನು ಸೇವಿಸಿದರೆ ನಿಮ್ಮ ಆರೋಗ್ಯದಲ್ಲಿ ಏರುಪೇರಾಗಬಹುದು.
ಪಪ್ಪಾಯ : ಹಲಸಿನ ಹಣ್ಣು ಅಥವಾ ಹಲಸಿನ ಕಾಯಿಯಿಂದ ಮಾಡಿದ ಅಡುಗೆಗಳನ್ನು ತಿಂದ ಮೇಲೆ ಪಪ್ಪಾಯ ತಿನ್ನಬಾರದು. ಅಕಸ್ಮಾತ್ ತಿಂದರೆ ಚರ್ಮದ ಅಲರ್ಜಿ ಉಂಟಾಗಬಹುದು. ಅಲ್ಲದೆ ಲೂಸ್ ಮೋಷನ್ ಸಮಸ್ಯೆಯಾಗುವ ಸಾಧ್ಯತೆಯೂ ಇರುತ್ತದೆ.
ಹಾಲು: ಹಲಸಿನ ಹಣ್ಣು ತಿಂದ ಮೇಲೆ ಅನೇಕರು ಹಾಲು ಕುಡಿಯುತ್ತಾರೆ, ಆದರೆ ಎಂದಿಗೂ ಈ ರೀತಿ ಮಾಡಬೇಡಿ. ಇದು ಹೊಟ್ಟೆಯಲ್ಲಿ ಊತದ ಜೊತೆಗೆ ಚರ್ಮದ ದದ್ದುಗಳಿಗೆ ಕಾರಣವಾಗಬಹುದು. ಅನೇಕರಿಗೆ ಬಿಳಿ ಚುಕ್ಕೆಗಳ ಸಮಸ್ಯೆ ಶುರುವಾಗುತ್ತದೆ.
ಬೆಂಡೆಕಾಯಿ: ಹಲಸಿನ ಹಣ್ಣು ತಿಂದ ಮೇಲೆ ಬೆಂಡೆಕಾಯಿ ಸೇವಿಸಿದ್ರೆ ನಿಮ್ಮ ಪಾದಗಳಲ್ಲಿ ನೋವು ಕಾಣಿಸಿಕೊಳ್ಳುವ ಅಪಾಯವಿರುತ್ತದೆ. ಇದಲ್ಲದೆ ಆಸಿಡಿಟಿ ಕೂಡ ಉಂಟಾಗುವ ಸಾಧ್ಯತೆ ಇರುತ್ತದೆ.
ಪಾನ್: ಹೆಚ್ಚಿನವರಿಗೆ ಊಟವಾದ ನಂತರ ಪಾನ್ ತಿನ್ನುವ ಅಭ್ಯಾಸವಿರುತ್ತದೆ. ಊಟಕ್ಕೆ ನೀವು ಹಲಸಿನ ಮೇಲೋಗರ ಅಥವಾ ಹಲಸಿನ ಹಣ್ಣಿನ ತಿನಿಸುಗಳನ್ನು ಸೇವಿಸಿದ್ದರೆ ಊಟವಾದ ಬಳಿಕ ಪಾನ್ ತಿನ್ನಬೇಡಿ.