ದೇಹವು ದಿನವಿಡೀ ಶಕ್ತಿಯುತವಾಗಿರಲು ಬೆಳಗಿನ ಉಪಹಾರ ಬಹಳ ಮುಖ್ಯ. ಆದರೆ ಕೆಲವರು ಬೆಳಗಿನ ಉಪಹಾರಕ್ಕೆ ತಪ್ಪಾದ ಆಹಾರವನ್ನು ಆಯ್ಕೆ ಮಾಡುತ್ತಾರೆ. ಅದು ನಮ್ಮ ದೇಹದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಬೆಳಿಗ್ಗೆ ಹೊಟ್ಟೆ ಖಾಲಿ ಇರುವ ಕಾರಣ ಇಂತಹ ಆಹಾರಗಳನ್ನು ಸೇವಿಸಬೇಡಿ.
*ಸಲಾಡ್ : ಸಲಾಡ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಯಾವುದೇ ಪ್ರಯೋಜನವಿಲ್ಲ. ಇದರಿಂದ ಹೊಟ್ಟೆಯಲ್ಲಿ ಅನಿಲ ಮತ್ತು ಎದೆಯುರಿ ಸಮಸ್ಯೆ ಕಾಡುತ್ತದೆ.
*ಸಿಟ್ರಸ್ ಹಣ್ಣುಗಳಾದ ಕಿತ್ತಳೆ, ನಿಂಬೆ, ಕಿವಿ ಹಣ್ಣುಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬೇಡಿ. ಇದು ಆಮ್ಲೀಯತೆಯನ್ನು ಹೊಂದಿದ್ದು, ಗ್ಯಾಸ್ಟ್ರಿಕ್ ಮತ್ತು ಎದೆಯುರಿ ಮುಂತಾದ ಸಮಸ್ಯೆ ಕಾಡುತ್ತದೆ.
*ಬಾಳೆಹಣ್ಣು : ಬಾಳೆಹಣ್ಣು ಆರೋಗ್ಯಕ್ಕೆ ಉತ್ತಮವಾದರೂ ಇದನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಬಾರದು. ಇದರಿಂದ ವಾಂತಿ, ಹೊಟ್ಟೆಯ ಅಸ್ವಸ್ಥತೆ ಸಮಸ್ಯೆ ಕಾಡುತ್ತದೆ.
*ಟೊಮೆಟೊ : ಟೊಮೆಟೊವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು. ಇದು ಹಾನಿಯುಂಟುಮಾಡುತ್ತದೆ. ಇದರಲ್ಲಿ ಸಿಟ್ರಸ್ ಹಣ್ಣುಗಳಂತಹ ಆಮ್ಲೀಯ ಅಂಶವಿದ್ದು, ಅದು ಹೊಟ್ಟೆಗೆ ಹಾನಿಕಾರಕವಾಗಿದೆ.