ಹಾಲಿನಲ್ಲಿ ಸಾಕಷ್ಟು ಒಳ್ಳೆಯ ಪೋಷಕಾಂಶಗಳಿವೆ ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಕೆಲವೊಮ್ಮೆ ಹಾಲು ಕುಡಿದ ಬಳಿಕ ಈ ತಪ್ಪನ್ನು ಮಾಡುವುದರಿಂದ ಹಾಲಿನ ಒಳ್ಳೆಯ ಗುಣಗಳು ನಿಮಗೆ ಸಿಗದೇ ಹೋಗಬಹುದು. ಆ ತಪ್ಪುಗಳು ಯಾವುವು ಎಂದಿರಾ?
ಹಾಲು ಕುಡಿದ ತಕ್ಷಣ ನೀರು ಕುಡಿದರೆ ಹೊಟ್ಟೆ ಕೆಡುತ್ತದೆ. ಆ ತಕ್ಷಣ ನೀರು ಕುಡಿಯುವುದರಿಂದ ಕೆಲವೊಮ್ಮೆ ವಾಕರಿಕೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಹಾಲಿನ ಪೋಷಕಾಂಶಗಳು ನಿಮ್ಮ ದೇಹಕ್ಕೆ ಲಭ್ಯವಾಗದೇ ಹೋಗಬಹುದು.
ಹಾಲು ಕುಡಿದ ತಕ್ಷಣ ನೀರು ಕುಡಿಯುವುದರಿಂದ ದೇಹದ ಜೀರ್ಣಕ್ರಿಯೆ ನಿಧಾನಗೊಳ್ಳುತ್ತದೆ. ಹಾಲು ಬೇಗ ಜೀರ್ಣವಾಗದೆ ಇರುವುದರಿಂದ ನಿಮಗೆ ಅಸಿಡಿಟಿ ಸಮಸ್ಯೆಯೂ ಬರಬಹುದು.
ಮೀನು ತಿಂದ ಕೂಡಲೆ ಹಾಲು ಕುಡಿಯುವುದರಿಂದಲೂ ದೇಹದಲ್ಲಿ ಕೆಮಿಕಲ್ ರಿಯಾಕ್ಷನ್ ಉಂಟಾಗುತ್ತದೆ. ಹಾಗಾಗಿ ಈ ಅಭ್ಯಾಸವನ್ನೂ ಕೈಬಿಡಿ. ಟ್ಯಾಬ್ಲೆಟ್ ತಿನ್ನುವಾಗ ಅದನ್ನು ಹಾಲಿನೊಂದಿಗೆ ಸೇವಿಸುವುದೂ ವಿಷಕಾರಿಯಾಗಿ ಪರಿಣಮಿಸಬಹುದು.