alex Certify ‘ಹಿಂದಿ ಹೇರಿಕೆ’ ವಿರುದ್ಧ ಆಕ್ರೋಶ: ಡಿಎಂಕೆ ಕಾರ್ಯಕರ್ತ ಆತ್ಮಾಹುತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಹಿಂದಿ ಹೇರಿಕೆ’ ವಿರುದ್ಧ ಆಕ್ರೋಶ: ಡಿಎಂಕೆ ಕಾರ್ಯಕರ್ತ ಆತ್ಮಾಹುತಿ

ಚೆನ್ನೈ: ತಮಿಳುನಾಡಿನ ಸೇಲಂ ಜಿಲ್ಲೆಯ ಮೆಟ್ಟೂರು ಬಳಿಯ ತಝೈಯೂರ್‌ನಲ್ಲಿರುವ ಪಕ್ಷದ ಕಚೇರಿಯ ಬಳಿ ಡಿಎಂಕೆ ಹಿರಿಯ ಕಾರ್ಯಕರ್ತರು ಸ್ವಯಂ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ್ದಾರೆ.

ತಂಗವೇಲ್(85) ಅವರು ‘ಹಿಂದಿ ಹೇರಿಕೆ’ ವಿರುದ್ಧ ತಮ್ಮ ಪ್ರತಿಭಟನೆಯನ್ನು ತೋರಿಸಲು ತೀವ್ರ ಹೆಜ್ಜೆ ಇಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಂಗವೇಲ್ ಡಿಎಂಕೆ ರೈತ ಘಟಕದ ಮಾಜಿ ಪದಾಧಿಕಾರಿಯಾಗಿದ್ದು, ಬೆಳಿಗ್ಗೆ ಪಕ್ಷದ ಕಚೇರಿಗೆ ಆಗಮಿಸಿ ‘ಹಿಂದಿ ಹೇರಿಕೆ’ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ನಂತರ ತನ್ನ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿಕಡ್ಡಿಯಿಂದ ಬೆಂಕಿ ಹಚ್ಚಿಕೊಂಡಿದ್ದಾರೆ. ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕರು ಅವರನ್ನು ರಕ್ಷಿಸಲು ಪ್ರಯತ್ನಿಸಿದರೂ ತಂಗವೇಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ತಮಿಳು ಭಾಷೆ ಇರುವಾಗ ಹಿಂದಿಯನ್ನು ಹೇರುವ ಅಗತ್ಯವಿಲ್ಲ ಎಂದು ಬರೆದ ಕಾಗದ ವಶಪಡಿಸಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...