ಮಾರ್ವಾಡಿ ಕುಟುಂಬದಲ್ಲಿ ಜನಿಸಿದ್ದ ದಮಾನಿ ಮುಂಬೈನ 1 ಕೋಣೆಯ ಮನೆಯಲ್ಲಿ ವಾಸವಿದ್ದರು. ಮುಂಬೈ ಯುನಿವರ್ಸಿಟಿಯಲ್ಲಿ ಕಾಮರ್ಸ್ ವಿಭಾಗದಲ್ಲಿ ವ್ಯಾಸಂಗವನ್ನು ಮಾಡುತ್ತಿದ್ದ ದಮಾನಿ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಬಿಟ್ಟಿದ್ದರು.
ದಲಾಲ್ ಸ್ಟ್ರೀಟ್ನಲ್ಲಿ ಕೆಲಸ ಮಾಡುತ್ತಿದ್ದ ತಂದೆಯ ನಿಧನದ ಬಳಿಕ ದಮಾನಿ ತಮ್ಮ ಬಾಲ್ ಬೇರಿಂಗ್ ಉದ್ಯಮವನ್ನು ತ್ಯಜಿಸಿ ಸ್ಟಾಕ್ ಮಾರ್ಕೆಟ್ ದಲ್ಲಾಳಿ ಹಾಗೂ ಹೂಡಿಕೆದಾರನಾಗಿ ಉದ್ಯಮ ಆರಂಭಿಸಿದರು.
1992ರಲ್ಲಿ ಹರ್ಷದ್ ಮೆಹ್ತಾ ಹಗರಣ ಬೆಳಕಿಗೆ ಬಂದ ಬಳಿಕ ಅಲ್ಪ ಮಾರಾಟ ಲಾಭ ಹೊಂದಿದ ದಮಾನಿ ತಮ್ಮ ಆದಾಯದಲ್ಲಿ ಏರಿಕೆ ಕಾಣುತ್ತಾ ಹೋದರು.
2000 ದಲ್ಲಿ ಸ್ಟಾಕ್ ಮಾರ್ಕೆಟ್ನಿಂದ ಹೊರಬಂದ ದಮಾನಿ ಡಿಮಾರ್ಟ್ ಮಾಲೀಕತ್ವವನ್ನು ವಹಿಸಿದರು. 2002ರಲ್ಲಿ ಪೊವಾಲಿಯಲ್ಲಿ ಮೊದಲ ಶಾಖೆ ಆರಂಭಿಸಿದ ದಮಾನಿ 2010ರ ವೇಳೆಗೆ 25 ಅಂಗಡಿಗಳ ಮಾಲೀಕರಾಗಿದ್ದರು. 2017ರ ಬಳಿಕ ಈ ಸೂಪರ್ ಮಾರ್ಕೆಟ್ ಗಣನೀಯ ಪ್ರಮಾಣದಲ್ಲಿ ಲಾಭ ಗಳಿಸಿದೆ.
ಪ್ರಸ್ತುತ ದಮಾನಿ ದೇಶದಲ್ಲಿ 6ನೇ ಅತಿ ಹೆಚ್ಚು ಶ್ರೀಮಂತ ಎನಿಸಿಕೊಂಡಿದ್ದಾರೆ. ಇವರ ಪ್ರಸ್ತುತ ಆಸ್ತಿಯು 19.2 ಬಿಲಿಯನ್ ಡಾಲರ್ ಮೌಲ್ಯ ಹೊಂದಿದೆ.
ಭಾರತದ ಟಾಪ್ 10 ಶ್ರೀಮಂತರ ಪಟ್ಟಿ :
ಹೆಸರು ಆಸ್ತಿ ಮೌಲ್ಯ
ಮುಕೇಶ್ ಅಂಬಾನಿ $82.3 ಬಿಲಿಯನ್
ಗೌತಮ್ ಅದಾನಿ $ 54.5 ಬಿಲಿಯನ್
ಅಜೀಂ ಪ್ರೇಮ್ಜಿ $ 37.1 ಬಿಲಿಯನ್
ಶಿವ್ ನಾಡಾರ್ $ 28.5 ಬಿಲಿಯನ್
ಲಕ್ಷ್ಮಿ ಮಿತ್ತಲ್ $ 22.4 ಬಿಲಿಯನ್
ರಾಧಕಿಶನ್ ದಮಾನಿ $ 19.2 ಬಿಲಿಯನ್
ಉದಯ್ ಕೋಟಕ್ $ 14.8 ಬಿಲಿಯನ್
ಸೈರಸ್ ಪೂನಾವಾಲ $ 14.3 ಬಿಲಿಯನ್
ದಿಲೀಪ್ ಶಾಂಗ್ವಿ $ 13.7 ಬಿಲಿಯನ್
ಸಾವಿತ್ರಿ ಜಿಂದಾಲ್ $ 12.8 ಬಿಲಿಯನ್
12.8 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ, ಸಾವಿತ್ರಿ ಜಿಂದಾಲ್ ಭಾರತದ ಶ್ರೀಮಂತ ಮಹಿಳೆಯಾಗಿ ಮುಂದುವರಿದಿದ್ದಾರೆ.