alex Certify ಅಪಾಯದಲ್ಲಿದೆ ಈ ಕಂಪನಿ ವೈಫೈ ರೂಟರ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪಾಯದಲ್ಲಿದೆ ಈ ಕಂಪನಿ ವೈಫೈ ರೂಟರ್ಸ್

ಇದು ಇಂಟರ್ನೆಟ್ ಯುಗ. ಸಾಮಾಜಿಕ ಜಾಲತಾಣಗಳ ಬಳಕೆ ಈಗ ಹೆಚ್ಚಾಗ್ತಿದೆ. ಇದೇ ಹ್ಯಾಕರ್ಸ್ ಗೆ ಮೂಲವಾಗಿದೆ. ಅಪ್ಲಿಕೇಷನ್ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಮೊಬೈಲ್ ಪ್ರವೇಶ ಮಾಡುವ ಹ್ಯಾಕರ್ಸ್, ಬಳಕೆದಾರರ ಖಾತೆ ಮಾಹಿತಿ ಪಡೆಯುತ್ತಾರೆ. ಆದ್ರೀಗ ಹ್ಯಾಕರ್ಸ್ ಕಣ್ಣು ವೈಫೈ ರೂಟರ್ ಗಳ ಮೇಲೆ ಬಿದ್ದಿದೆ.

ಇಂದಿನ ಕಾಲದಲ್ಲಿ ವೈ-ಫೈ ಪ್ರತಿ ಮನೆಯಲ್ಲೂ ಬಳಕೆಯಲ್ಲಿದೆ. ಇತ್ತೀಚೆಗಷ್ಟೇ ವೈಫೈನ ಹಲವು ಟಾಪ್ ಕಂಪನಿಗಳ ರೂಟರ್‌ಗಳು ಅಪಾಯದಲ್ಲಿದೆ ಎಂಬುದು ಬಹಿರಂಗವಾಗಿದೆ. ರೂಟರ್‌ಗಳ ಮೂಲಕ ಹ್ಯಾಕರ್‌ಗಳು ಸುಲಭವಾಗಿ ನೆಟ್‌ವರ್ಕ್ ಪ್ರವೇಶಿಸಿ ಬಳಕೆದಾರರ ಡೇಟಾವನ್ನು ಕದಿಯುತ್ತಿದ್ದಾರೆ.

ಹ್ಯಾಕರ್ಸ್ ದಾಳಿಗೆ ಒಳಗಾಗುವ ಅಪಾಯದಲ್ಲಿರುವ ವೈಫ್ ರೂಟರ್ಸ್ ಗಳು : D-Link, Asus, Netgear, AVM, TP-Link, Synology ಮತ್ತು Edimax

ಈ ಕಂಪನಿಗಳ ರೂಟರ್ ಬಳಕೆದಾರರು ಎಚ್ಚರಿಕೆಯಿಂದಿರಬೇಕೆಂದು ಹೇಳಲಾಗ್ತಿದೆ.

ಮಣ್ಣು, ಗಿಡಮೂಲಿಕೆ ಸಸ್ಯಗಳಿಂದಲೇ ನಿರ್ಮಾಣವಾಗಿದೆ ಈ ಸುಂದರ ಮನೆ….!

ಈ ಕಂಪನಿಗಳ ವೈಫೈ ರೂಟರ್‌ಗಳು ಹ್ಯಾಕರ್‌ಗಳಿಗೆ ಸೈಬರ್ ದಾಳಿಯನ್ನು ನಡೆಸಲು ಸುಲಭವಾದ ಸಾಧನವಾಗಿದೆ. ವರದಿಯ ಪ್ರಕಾರ, ಈ ಕಂಪನಿಗಳು ತಮ್ಮ ರೂಟರ್‌ಗಳಲ್ಲಿ ಬಳಸುವ ಸಾಧನಗಳು ತುಂಬಾ ಹಳೆಯ ಆವೃತ್ತಿಗಳಾಗಿವೆ. ಇದರಿಂದಾಗಿ ಈ ರೂಟರ್‌ಗಳ ಹ್ಯಾಕ್ ಮಾಡುವುದು ತುಂಬ ಸುಲಭ ಎನ್ನಲಾಗಿದೆ. ಹೆಚ್ಚಿನ ಕಂಪನಿಗಳು ಅತ್ಯಂತ ಸರಳವಾದ ಪಾಸ್ವರ್ಡ್‌ಗಳನ್ನು ಬಳಸುತ್ತವೆ. ಅಡ್ಮಿನ್ ಮತ್ತು 1234 ನಂತಹ ಪಾಸ್ವರ್ಡ್‌ಗಳು ತುಂಬಾ ಸಾಮಾನ್ಯವಾಗಿದೆ. ಹ್ಯಾಕರ್‌ಗಳು ಅವುಗಳನ್ನು ಸುಲಭವಾಗಿ ಊಹಿಸಬಹುದು. ಕಂಪನಿ ಮಾತ್ರವಲ್ಲ ಬಳಕೆದಾರರೂ ಈ ಪಾಸ್ವರ್ಡ್ ಬಳಸ್ತಾರೆ. ಹಾಗಾಗಿ ಹ್ಯಾಕರ್ ಗಳಿಗೆ ಕೆಲಸ ಮತ್ತಷ್ಟು ಸುಲಭವಾಗುತ್ತದೆ.

ಅಪಾಯದಲ್ಲಿರುವ ರೂಟರ್ ಕಂಪನಿ ಪಟ್ಟಿ ಬಿಡುಗಡೆಯಾದ ತಕ್ಷಣ ಕಂಪನಿಗಳು ಕ್ರಮಕ್ಕೆ ಮುಂದಾಗಿವೆ. ಸಾವಿರ ವೈಫೈ ರೂಟರ್‌ಗಳಲ್ಲಿ ಸುಮಾರು 226 ಭದ್ರತಾ ಸಮಸ್ಯೆಗಳು ಕಂಡು ಬಂದಿವೆ. ಇವು ಅಷ್ಟು ಅಪಾಯಕಾರಿ ಅಲ್ಲ. ಆದರೆ ಖಂಡಿತವಾಗಿಯೂ ಹ್ಯಾಕರ್‌ಗಳ ಅಪಾಯವಿದೆ ಎಂದು ವರದಿ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...