alex Certify ಈ ಬಾರಿ ನಿಂಬೆಹಣ್ಣು ಕೆಲಸ ಮಾಡಲ್ಲ, ಉಲ್ಟಾ ಹೊಡೆಯುತ್ತೆ: ಹೆಚ್.ಡಿ. ರೇವಣ್ಣಗೆ ಡಿ.ಕೆ. ಸುರೇಶ್ ಟಾಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಬಾರಿ ನಿಂಬೆಹಣ್ಣು ಕೆಲಸ ಮಾಡಲ್ಲ, ಉಲ್ಟಾ ಹೊಡೆಯುತ್ತೆ: ಹೆಚ್.ಡಿ. ರೇವಣ್ಣಗೆ ಡಿ.ಕೆ. ಸುರೇಶ್ ಟಾಂಗ್

ಹಾಸನ: ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ನಿಂಬೆಹಣ್ಣು ಕೆಲಸ ಮಾಡುವುದಿಲ್ಲ. ನಿಂಬೆಹಣ್ಣು ಉಲ್ಟಾ ಹೊಡೆಯಲು ಪ್ರಾರಂಭವಾಗಿದೆ ಎಂದು ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ.

ಹೊಳೆನರಸೀಪುರದ ಜಯಲಕ್ಷ್ಮಿ ಮಿಲ್ ಆವರಣದಲ್ಲಿ ಶನಿವಾರ ಸಂಜೆ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರಿಗೆ ತಿರುಗೇಟು ನೀಡಿದ್ದಾರೆ. ಹೊಳೆನರಸೀಪುರದ ದೈತ್ಯ ಶಕ್ತಿಗಳು ಬೆದರಿಸಿ, ಹೆದರಿಸಿ ಬೇರೆ ಬೇರೆ ರೀತಿಯ ಆಮಿಷ ತೋರಿಸಿ 25 ವರ್ಷಗಳಿಂದ ಗೆದ್ದಿದ್ದಾರೆ. ಈ ಬಾರಿ ಇಂತಹ ಆಟಗಳು ನಡೆಯುವುದಿಲ್ಲ. ಯಾವುದೇ ನಿಂಬೆಹಣ್ಣು ಕೆಲಸ ಮಾಡುವುದಿಲ್ಲ. ಕಾಂಗ್ರೆಸ್ ಜಯಭೇರಿ ಬಾರಿಸಲಿದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...