
ದೀಪಾವಳಿ ಎಂದರೆ ಬೆಳಕಿನ ಹಬ್ಬ. ಎಲ್ಲೆಲ್ಲೂ ಕಾಣುವ ಬೆಳಕು ಹಬ್ಬಕ್ಕೆ ಇನ್ನಷ್ಟು ಮೆರುಗು ನೀಡುತ್ತದೆ. ಕಡಿಮೆ ಖರ್ಚಿನಲ್ಲಿ ಮನೆಯನ್ನು ಸಿಂಗರಿಸಲು ಬಯಸ್ತಾರೆ. ಕಡಿಮೆ ಖರ್ಚಿನಲ್ಲಿ ಡ್ರಾಯಿಂಗ್ ರೂಮ್ ಗೆ ಆಕರ್ಷಕ ಲುಕ್ ನೀಡಲು ಕೆಲ ಐಡಿಯಾ ಇಲ್ಲಿದೆ.
ಈ ದೀಪಾವಳಿಗೆ, ಡ್ರಾಯಿಂಗ್ ರೂಮಲ್ಲಿ ಇಂಡೋರ್ ಪ್ಲಾಂಟ್ ಇಡಬಹುದು. ಇದರಿಂದ ಮನೆ ಸುಂದರವಾಗಿ ಕಾಣುತ್ತದೆ. ಮನೆಯಲ್ಲಿ ಪೊಸಿಟಿವ್ ಎನರ್ಜಿ ಇರುತ್ತದೆ. ಸುಂದರ ಪಾಟ್ ನಲ್ಲಿ ಗಿಡಗಳನ್ನು ಇಟ್ಟು ಅದಕ್ಕೆ ಬಣ್ಣ ಬಣ್ಣದ ಲೈಟ್ ಹಾಕಿದರೆ ಡ್ರಾಯಿಂಗ್ ರೂಮಿಗೆ ಇನ್ನಷ್ಟು ಕಳೆ ಬರುತ್ತದೆ.
ದೀಪಾವಳಿಯಂದು ಪೊರಕೆ ಖರೀದಿ ಮಾಡಿದ್ರೆ ʼಶುಭʼ
ಇತ್ತೀಚೆಗೆ ಮಾರುಕಟ್ಟೆಯಲ್ಲಿ ವಿವಿಧ ಬಣ್ಣದ ಕುಶನ್ ಸಿಗುತ್ತವೆ. ಮನೆಯ ಕರ್ಟನ್ ಗೆ ಹೊಂದುವಂತ ಕುಶನ್ ಕವರ್ ಹಾಕಬಹುದು. ಇದು ಡ್ರಾಯಿಂಗ್ ರೂಮ್ ಸೌಂದರ್ಯ ಹೆಚ್ಚಿಸುತ್ತದೆ.
ವಾಲ್ ಹ್ಯಾಂಗಿಂಗ್ ಎಂದರೆ ಮಕ್ಕಳಿಗೆ ಬಲು ಪ್ರೀತಿ. ಇಷ್ಟವಾಗುವ ಬಣ್ಣದ ವಾಲ್ ಹ್ಯಾಂಗಿಂಗ್ ಮನೆಯಲ್ಲಿಯೇ ಮಾಡಬಹುದು. ಕೆಲ ಹಳೆ ವಸ್ತುಗಳನ್ನು ಬಳಸಿ ಕೂಡ ವಾಲ್ ಹ್ಯಾಂಗಿಂಗ್ ಮಾಡಬಹುದು.
ʼದೀಪಾವಳಿʼ ದಿನ ರಸ್ತೆಯಲ್ಲಿ ಹಣ ಸಿಕ್ರೆ ಏನ್ಮಾಡ್ಬೇಕು ಗೊತ್ತಾ….?
ಡ್ರಾಯಿಂಗ್ ರೂಮಲ್ಲಿ ಟೇಬಲ್ ಅಥವಾ ಖಾಲಿ ಸ್ಥಳಗಳಿದ್ದಲ್ಲಿ ನೀವು ಅದನ್ನು ಅಂದವಾದ ಬಟ್ಟೆಯಿಂದ ಸಿಂಗರಿಸಿ ಅದರ ಮೇಲೆ ಹೂವಿನ ಬೊಕ್ಕೆ, ಮೇಣದ ಬತ್ತಿಯನ್ನು ಇಟ್ಟು ಕೂಡ ಸಿಂಗರಿಸಬಹುದು.
ಲೈಟ್ ಇಲ್ಲದೇ ದೀಪಾವಳಿ ಡೆಕೊರೇಶನ್ ಪೂರ್ತಿಯಾಗುವುದಿಲ್ಲ. ಪೇಯರಿ ಲೈಟ್ಸ್ ನಿಂದ ತಯಾರಿಸಿರುವ ಪರದೆಗಳು ವಿವಿಧ ಡಿಸೈನ್ ನಲ್ಲಿ ಸಿಗುತ್ತವೆ. ಇದನ್ನು ನೀವು ಬಳಸಬಹುದು.