alex Certify ಈ ರಾಶಿಯವರ ಮೇಲೆ ದೀಪಾವಳಿಯಿಂದ ಕೃಪೆ ತೋರಲಿದ್ದಾಳೆ ಲಕ್ಷ್ಮಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರ ಮೇಲೆ ದೀಪಾವಳಿಯಿಂದ ಕೃಪೆ ತೋರಲಿದ್ದಾಳೆ ಲಕ್ಷ್ಮಿ

ದೀಪಗಳ ಹಬ್ಬ ದೀಪಾವಳಿಯನ್ನು ಈ ಬಾರಿ ಅಕ್ಟೋಬರ್ 24 ರಂದು ಆಚರಣೆ ಮಾಡಲಾಗ್ತಾ ಇದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಬಾರಿ ದೀಪಾವಳಿಯಂದು ಗ್ರಹಗಳು ಮತ್ತು ರಾಶಿಗಳ ವಿಶೇಷ ಸಂಯೋಜನೆ ನೋಡಬಹುದಾಗಿದೆ. ಈ ಬಾರಿ ದೀಪಾವಳಿಯಲ್ಲಿ ತಾಯಿ ಲಕ್ಷ್ಮಿ ಕೆಲ ರಾಶಿಯವರನ್ನು ಆಶೀರ್ವದಿಸಲಿದ್ದಾಳೆ.

ತುಲಾ ರಾಶಿ : ಜ್ಯೋತಿಷ್ಯಶಾಸ್ತ್ರದ ಪ್ರಕಾರ, ದೀಪಾವಳಿಯ ದಿನದಂದು  ತುಲಾ ರಾಶಿಯ ಜನರ ಮೇಲೆ ತಾಯಿ ಲಕ್ಷ್ಮಿಯ ವಿಶೇಷ ಕೃಪೆ ಇರಲಿದೆ. ಈ ದಿನ ಹಠಾತ್ ವಿತ್ತೀಯ ಲಾಭ ನಿಮಗೆ ಸಿಗಲಿದೆ. ವ್ಯಾಪಾರದಲ್ಲಿ ಭಾರೀ ಆರ್ಥಿಕ ಬೆಳವಣಿಗೆ ಕಂಡುಬರಲಿದೆ. ಹೊಸ ವ್ಯಾಪಾರ ಶುರು ಮಾಡುವವರಿಗೆ ಆರ್ಥಿಕ ಪ್ರಗತಿಯಾಗಲಿದೆ. ಉದ್ಯೋಗದಲ್ಲಿ ಬಡ್ತಿ ಅಥವಾ ಹೆಚ್ಚುವರಿ ಹಣದ ಲಾಭ ಸಿಗಲಿದೆ.

ವೃಷಭ ರಾಶಿ : ತಾಯಿ ಲಕ್ಷ್ಮಿ, ವೃಷಭ ರಾಶಿಯವರ ಮೇಲೆ ಕೃಪೆ ತೋರಲಿದ್ದಾಳೆ. ದೀಪಾವಳಿ ದಿನ ಈ ರಾಶಿಯವರ ಸಂಪತ್ತು ಹೆಚ್ಚಾಗಲಿದೆ. ಹಳೆ ಸಾಲ ವಾಪಸ್‌ ಬರಲಿದೆ. ಐಷಾರಾಮಿ ಜೀವನ ನಿಮ್ಮದಾಗಲಿದೆ. ವ್ಯಾಪಾರದಲ್ಲಿ ಲಾಭವಾಗಲಿದೆ.

ಸಿಂಹ ರಾಶಿ :  ಸಿಂಹ ರಾಶಿಯವರ ಅದೃಷ್ಟದ ಬಾಗಿಲು ತೆರೆಯಲಿದೆ. ಶುಭ ಯೋಗ ಕೂಡಿ ಬರಲಿದೆ. ಆರ್ಥಿಕ ಬೆಳವಣಿಗೆಯಾಗಲಿದೆ. ವಿತ್ತೀಯ ಲಾಭದ ಜೊತೆಗೆ ವ್ಯಾಪಾರ ವಿಸ್ತರಣೆಯಾಗಲಿದೆ. ಧನ ತ್ರಯೋದಶಿ ದಿನ ಹಠಾತ್ ಆರ್ಥಿಕ ಪ್ರಗತಿ ಕಂಡು ಬರಲಿದೆ. ಹಿರಿಯರ ಕೃಪೆಯಿಂದ ವ್ಯಾಪಾರದಲ್ಲಿ ಲಾಭವಾಗಲಿದೆ.

ಮೀನ ರಾಶಿ : ಈ ದೀಪಾವಳಿಯಂದು ಮೀನ ರಾಶಿಯವರ ಭಾಗ್ಯದ ಬಾಗಿಲು ತೆರೆಯಲಿದೆ. ಲಾಟರಿಯಿಂದ ಲಾಭವಾಗುವ ಸಾಧ್ಯತೆಯಿದೆ.  ಲಕ್ಷ್ಮಿ ಕೃಪೆಯಿಂದ ವ್ಯಾಪಾರದಲ್ಲಿ ಆರ್ಥಿಕ ವೃದ್ಧಿಯಾಗಲಿದೆ.  ದೈನಂದಿ ಆದಾಯದಲ್ಲಿ ಹೆಚ್ಚಳವಾಗಲಿದೆ. ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇರುತ್ತದೆ. ದೀಪಾವಳಿಯ ರಾತ್ರಿ ಹಠಾತ್ ಹಣ  ಲಾಭವಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...