ಬಂಧಿತ ಮಹಿಳಾ ಖೈದಿಯ ಬಟ್ಟೆಯನ್ನು ಬಲವಂತವಾಗಿ ಬಿಚ್ಚಿಸಿ, ಇತರ ಖೈದಿಗಳ ಮುಂದೆ ನೃತ್ಯ ಮಾಡಿಸಿದ ಅಮಾನುಷ ಕೃತ್ಯವೊಂದು ನಡೆದಿದೆ. ಈ ಹೇಯ ಕೃತ್ಯ ಬಹಿರಂಗವಾಗುತ್ತಿದ್ದಂತೆ ಈ ಘಟನೆಗೆ ಕಾರಣೀಭೂತರಾದ ಮಹಿಳಾ ಅಧಿಕಾರಿಯನ್ನು ಕೆಲಸದಿಂದಲೇ ವಜಾಗೊಳಿಸಲಾಗಿದೆ.
ಇದು ನಡೆದಿದ್ದು ನೆರೆಯ ಪಾಕಿಸ್ತಾನದಲ್ಲಿ. ಬಲೂಚಿಸ್ತಾನ ಪ್ರಾಂತ್ಯದ ಪೊಲೀಸರು ಮಹಿಳಾ ಖೈದಿಗೆ ಬಟ್ಟೆ ತೆಗೆಯುವಂತೆ ಒತ್ತಾಯಿಸಿ, ನಂತರ ನೃತ್ಯ ಮಾಡುವಂತೆ ಮಾಡಿದ್ದಾರೆ.
ಇನ್ಸ್‌ಪೆಕ್ಟರ್ ಶಹಾನಾ ಇರ್ಷಾದ್ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡ ಆರೋಪದಲ್ಲಿ ತಪ್ಪಿತಸ್ಥರೆಂದು ಪೊಲೀಸ್ ವಿಚಾರಣಾ ಸಮಿತಿಯು ತೀರ್ಪು ನೀಡಿದೆ. ಪೊಲೀಸ್ ರಿಮಾಂಡ್ ಅವಧಿಯಲ್ಲಿ ಜೈಲಿನಲ್ಲಿದ್ದ ಮಹಿಳಾ ಕೈದಿಯೊಂದಿಗೆ ಶಬಾನಾ ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ಸಮಿತಿ ವರದಿ ನೀಡಿದೆ.
ಮತ್ತೊಂದು ರೂಪದಲ್ಲಿ ವಿಶ್ವವಿಖ್ಯಾತ ʼಮನಿಕೆ ಮಗೆ ಹಿತೆʼ ಹಾಡು
ಕ್ವೆಟ್ಟಾ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಮುಹಮ್ಮದ್ ಅಜರ್ ಅಕ್ರಮ್ ಹೇಳುವಂತೆ, ಮಗುವಿನ ಹತ್ಯೆ ವಿಚಾರವಾಗಿ ಲೇಡಿ ಇನ್ಸ್‌ಪೆಕ್ಟರ್, ಪಾರಿ ಗುಲ್ ಎಂಬ ಮಹಿಳೆಯನ್ನು ವಿಚಾರಣೆಗಾಗಿ ಕರೆತಂದಿರುವುದು ತನಿಖೆಯಿಂದ ತಿಳಿದುಬಂದಿದೆ.
ಮಹಿಳೆ ಪೊಲೀಸ್ ರಿಮಾಂಡ್‌ನಲ್ಲಿದ್ದಾಗ, ಲೇಡಿ ಇನ್ಸ್‌ಪೆಕ್ಟರ್ ಶಬಾನಾ, ಅವಳನ್ನು ವಿವಸ್ತ್ರಗೊಳಿಸಿದ್ದು ಮಾತ್ರವಲ್ಲದೆ ಇತರ ಕೈದಿಗಳ ಮುಂದೆ ನೃತ್ಯ ಮಾಡುವಂತೆ ಒತ್ತಾಯಿಸಿದ್ದಾರೆ.
ಲೇಡಿ ಇನ್ಸ್‌ಪೆಕ್ಟರ್ ತನ್ನನ್ನು ಸಮರ್ಥಿಸಿಕೊಳ್ಳಲು ಏನೂ ಇರಲಿಲ್ಲ. ಹೀಗಾಗಿ ಅವರನ್ನು ಬಲವಂತವಾಗಿ ಸೇವೆಯಿಂದ ವಜಾಗೊಳಿಸಲಾಗಿದೆ. ಮಹಿಳಾ ಇನ್ಸ್‌ಪೆಕ್ಟರ್ ಇನ್ನೊಬ್ಬ ಮಹಿಳೆಗೆ ಈ ರೀತಿ ಮಾಡಿದರೆ ಮತ್ತು ಅವರ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಾಗ ಅದನ್ನು ಸಹಿಸಲಾಗುವುದಿಲ್ಲ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.