alex Certify BIG NEWS: ರಾಜ್ಯದಲ್ಲಿಂದು 299 ಜನರಿಗೆ ಸೋಂಕು ದೃಢ, 6 ಮಂದಿ ಸಾವು; ಇಲ್ಲಿದೆ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಾಜ್ಯದಲ್ಲಿಂದು 299 ಜನರಿಗೆ ಸೋಂಕು ದೃಢ, 6 ಮಂದಿ ಸಾವು; ಇಲ್ಲಿದೆ ವಿವರ

ಬೆಂಗಳೂರು: ರಾಜ್ಯದಲ್ಲಿ ಇಂದು 299 ಜನರಿಗೆ ಸೋಂಕು ತಗುಲಿದ್ದು, 6 ಜನರು ಮೃತಪಟ್ಟಿದ್ದಾರೆ 260 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಪಾಸಿಟಿವಿಟಿ ದರ ಶೇಕಡ 0.36 ರಷ್ಟಿದೆ. ರಾಜ್ಯದಲ್ಲಿ 7100 ಸಕ್ರಿಯ ಪ್ರಕರಣಗಳು ಇದ್ದು, ಒಟ್ಟು ಸೋಂಕಿತರ ಸಂಖ್ಯೆ 29,98,599 ಕ್ಕೆ ಏರಿಕೆಯಾಗಿದೆ. ಇದುವರೆಗೆ 29,53,327 ಜನ ಗುಣಮುಖರಾಗಿದ್ದಾರೆ. 38,243 ಸೋಂಕಿತರು ಸಾವನ್ನಪ್ಪಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಇಂದು 215 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. 3 ಜನ ಸೋಂಕಿತರು ಮೃತಪಟ್ಟಿದ್ದಾರೆ. 97 ಜನ ಗುಣಮುಖರಾಗಿದ್ದಾರೆ. 5294 ಸಕ್ರಿಯ ಪ್ರಕರಣಗಳಿವೆ.

ಬಾಗಲಕೋಟೆ, ಬೀದರ್, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ರಾಮನಗರ, ಯಾದಗಿರಿ ಜಿಲ್ಲೆಯಲ್ಲಿ ಇಂದು ಯಾವುದೇ ಪ್ರಕರಣ ವರದಿಯಾಗಿಲ್ಲ.

ಬೆಂಗಳೂರು ನಗರ 215, ದಕ್ಷಿಣಕನ್ನಡ 14, ಕೊಡಗು 12, ಮೈಸೂರು 11 ಹೊಸ ಪ್ರಕರಣ ವರದಿಯಾಗಿದೆ. ಬೆಂಗಳೂರು ನಗರ 3, ದಕ್ಷಿಣಕನ್ನಡ 1, ಧಾರವಾಡ 1, ಮೈಸೂರು 1 ಸೇರಿ ರಾಜ್ಯದಲ್ಲಿ 6 ಜನರು ಮೃತಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...